Ad imageAd image

ಹಿಂದುಳಿದ ವರ್ಗದ ನಾಯಕನ ನಿಧನ ರಾಜ್ಯಕ್ಕೆ ನಷ್ಟ: ಶಾಸಕ ಅಶೋಕ ಮನಗೂಳಿ

ಮಾಜಿ ಸಚಿವ, ಹಾಲಿ ಶಾಸಕ ಎಚ್.ವೈ ಮೇಟಿ ಅವರ ನಿಧನ ಅತ್ಯಂತ ದುಃಖರ ಸಂಗತಿ. ಇದು ಒಂದು ಸಮಾಜ, ವರ್ಗಕ್ಕೆ ನಷ್ಟವಾಗಿಲ್ಲ.

Nagesh Talawar
ಹಿಂದುಳಿದ ವರ್ಗದ ನಾಯಕನ ನಿಧನ ರಾಜ್ಯಕ್ಕೆ ನಷ್ಟ: ಶಾಸಕ ಅಶೋಕ ಮನಗೂಳಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಮಾಜಿ ಸಚಿವ, ಹಾಲಿ ಶಾಸಕ ಎಚ್.ವೈ ಮೇಟಿ ಅವರ ನಿಧನ ಅತ್ಯಂತ ದುಃಖರ ಸಂಗತಿ. ಇದು ಒಂದು ಸಮಾಜ, ವರ್ಗಕ್ಕೆ ನಷ್ಟವಾಗಿಲ್ಲ. ಒಬ್ಬ ಹಿಂದುಳಿದ ನಾಯಕನ ನಿಧನದಿಂದ ರಾಜ್ಯಕ್ಕೆ ನಷ್ಟವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ಎಚ್.ವೈ ಮೇಟಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಗುಳೇದಗುಡ್ಡ ಮತಕ್ಷೇತ್ರದಿಂದ 5 ಬಾರಿ ಶಾಸಕರಾಗಿ, ಬಾಗಲಕೋಟೆ ಮತಕ್ಷೇತ್ರದಿಂದ ಒಮ್ಮೆ ಲೋಕಸಭೆ ಸದಸ್ಯರಾಗಿ, ಎರಡು ಬಾರಿ ಸಚಿವರಾಗಿ ಈ ನಾಡಿಗೆ ಸೇವೆ ಸಲ್ಲಿಸಿದ್ದಾರೆ. ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಸೇರಿ ಎಲ್ಲರನ್ನು ಪ್ರೀತಿಸುವ ಗುಣ ಮೇಟಿಯವರಲ್ಲಿತ್ತು. ನಮ್ಮ ತಂದೆಯವರ ಸಮಕಾಲಿನರು. ನಮ್ಮ ತಂದೆಯವರು, ಅವರು ಒಮ್ಮೆ ಶಾಸಕರಾಗಿದ್ದರು. ಇಂತಹ ಇಳಿ ವಯಸ್ಸಿನಲ್ಲಿಯೂ ಆರೋಗ್ಯದ ಸಮಸ್ಯೆಯ ನಡುವೆ ಜನಪರ ಕೆಲಸಗಳನ್ನು ಮಾಡುತ್ತಿದ್ದರು. ಇಂತಹ ಒಬ್ಬ ನಾಯಕ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ, ಹಿರಿಯ ಮುಖಂಡರಾದ ಮಲ್ಲಣ್ಣ ಸಾಲಿ, ಸೋಮನಗೌಡ ಬಿರಾದಾರ, ಕಲ್ಲಪ್ಪ ನಾಯ್ಕೋಡಿ, ವೈ.ಸಿ ಮಯೂರ, ಮಡ್ಡಪ್ಪ ಸೊನ್ನದ, ನೂರಾಹ್ಮದ ಅತ್ತಾರ, ಬಸವರಾಜ ಕಾಂಬಳೆ, ಪ್ರವೀಣ ಕಂಟಿಗೊಂಡ, ಅರವಿಂದ ಹಂಗರಗಿ, ಸಂಗನೌಡ ಬಿರಾದಾರ, ಹಾಸೀಂ ಆಳಂದ, ಸಂದೀಪ ಚೌರ, ಖಾದಿರ ಬಂಕಲಗಿ, ಶಾಂತಪ್ಪ ರಾಣಾಗೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article