ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಗೋಲಗೇರಿಯಲ್ಲಿ ಈ ಭಾಗದ ತಳವಾರ ಸಮಾಜದ ಬಹುದಿನಗಳ ಬೇಡಿಕೆಯಾಗಿದ್ದ ಶ್ರೀ ವಿರೇಶ್ವರ ದೇವಸ್ಥಾನದ ಸಭಾಭವನದ ಭೂಮಿಪೂಜೆಯನ್ನು ಶಾಸಕ ಅಶೋಕ ಮನಗೂಳಿ ಅವರು ಬುಧವಾರ ನೇರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಸಭಾ ಭವನ 2023-24ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಸುಮಾರು 10 ಲಕ್ಷ ರೂಪಾಯಿಗಳಲ್ಲಿ ಕಾಮಗಾರಿ ನಡೆಯಲಿದೆ. ಹಂತಹಂತವಾಗಿ ತಳವಾರ ಸಮಾಜದ ಅಭಿವೃದ್ಧಿ ಸೇರಿದಂತೆ ಎಲ್ಲ ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಹಿರಿಯ ಮುಖಂಡರಾದ ಗುರಣ್ಣಗೌಡ ಪಾಟೀಲ ನಾಗಾವಿ, ಮಲ್ಲಣ್ಣ ಸಾಲಿ, ರವಿರಾಜ ದೇವರಮನಿ, ವಿಜುಗೌಡ ಕರ್ನಾಳ, ಬಸವರಾಜ ಮಾರಲಭಾವಿ, ಪ್ರಕಾಶಗೌಡ ಬಿರಾದಾರ, ಕುಮಾರ ಗೊಂದಳಿ, ತಳವಾರ ಸಮಾಜದ ಮುಖಂಡರಾದ ರಮೇಶ ತಳವಾರ, ಮಡಿವಾಳ ನಾಯ್ಕೋಡಿ, ಮಂಜುನಾಥ ನಾಯ್ಕೋಡಿ, ಸಿದ್ದಪ್ಪ ನಾಯ್ಕೋಡಿ, ಮಲ್ಲಣ್ಣ ನಾಯ್ಕೋಡಿ ಬೆಂಗಳೂರು, ಗೋಲ್ಲಾಳ ನಾಯ್ಕೋಡಿ, ಶಶಿಕಾಂತ ನಾಯ್ಕೋಡಿ, ಗೋಲ್ಲಾಳಪ್ಪ ನಾಯ್ಕೋಡಿ, ಮಲ್ಲಪ್ಪ ನಾಯ್ಕೋಡಿ, ರಾವುತಪ್ಪ ಮಾಗಣಗೇರಿ, ಮಹಾಂತೇಶ ನಾಯ್ಕೋಡಿ, ಶಶಿಕಾಂತ ಜಾಲವಾದಿ, ಲಕ್ಷ್ಮಣ ಕಲಾಲ ಸೇರಿ ಇತರರಿದ್ದರು.