ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಜೋರಾಗಿ ನಡೆಯುತ್ತಿದೆ. ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ಕೆಳಗೆ ಇಳಿಯುತ್ತಾರೆ ಎನ್ನುತ್ತಿದ್ದರೆ, ಆಡಳಿತ ಪಕ್ಷದವರು ಅದು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಆದರೆ, ಇದರ ನಡುವೆಯೇ ಆಡಳಿತ ಪಕ್ಷದ ಶಾಸಕ, ಸಿಎಂ ಆಪ್ತ ಬಿ.ಆರ್ ಪಾಟೀಲ ನೀಡಿದ ಹೇಳಿಕೆ ವಿಪಕ್ಷಗಳಿಗೆ ಅಸ್ತ್ರ ಕೊಟ್ಟಂತಾಗಿದೆ. ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಐದು ವರ್ಷ ಇರ್ತಾರೋ ಇಲ್ವೋ ಗೊತ್ತಿಲ್ಲ. ಇರಬೇಕು ಎಂದು ನಾವು ಬಯಸುತ್ತೇವೆ. ಆದರೆ, ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಎಂದಿದ್ದಾರೆ.
ಆಳಂದ ಶಾಸಕ, ಸಿಎಂ ಆಪ್ತ ಸಲಹೆಗಾರ ಬಿ.ಆರ್ ಪಾಟೀಲ, ಸಿದ್ದರಾಮಯ್ಯನವರನ್ನು ಬದಲು ಮಾಡಬೇಕು ಎಂದು ಯಾವ ಶಾಸಕರ ಮನಸ್ಸಿನಲ್ಲಿ ಇಲ್ಲ. ಹೈಕಮಾಂಡ್ ಬೇರೆ ನಿರ್ಧಾರ ತೆಗೆದುಕೊಂಡರೆ ನಾವೇನು ಮಾಡಲು ಆಗಲ್ಲ. ಅವರಿಗೂ ಇನ್ನೂ ದೊಡ್ಡ ಜವಾಬ್ದಾರಿ ನೀಡಬಹುದು ಎಂದಿದ್ದಾರೆ. ಈ ಮೂಲಕ ಸಿಎಂ ಬದಲಾವಣೆಯ ಮಾತುಗಳಿಗೆ ಪುಷ್ಠಿ ನೀಡಿದ್ದಾರೆ.