ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಶಾಸಕ ಬಿ.ಆರ್ ಪಾಟೀಲ, ಸಿಎಂ ಸಲಹೆಗಾರ ಸ್ಥಾನಕ್ಕೆ ಶನಿವಾರ ಏಕಾಏಕಿ ರಾಜೀನಾಮೆ(Resignation)ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿಲ್ಲ. ತಮಗೆ ನೀಡಿದ್ದ ಕ್ಯಾಬಿನೆಟ್(Cabinet) ದರ್ಜೆಯ ಎಲ್ಲ ಸೌಲಭ್ಯಗಳನ್ನು ವಾಪಸ್ ಮಾಡಿದ್ದಾರಂತೆ. ದಿಢೀರ್ ಬೆಳವಣಿಗೆ ಹಿಂದಿನ ಕಾರಣ ಏನು ಅನ್ನೋ ಕುತೂಹಲ ಮೂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಏನು ಹೇಳುತ್ತಾರೆ ಕಾದು ನೋಡಬೇಕಿದೆ.