ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ವಸತಿ ಇಲಾಖೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದ ಸ್ವಪಕ್ಷೀಯ ಶಾಸಕ ಬಿ.ಆರ್ ಪಾಟೀಲ, ಈಗ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುರ್ಜೇವಾಲ್ ಅವರು ತಮ್ಮ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಶಾಸಕ ಬಿ.ಆರ್ ಪಾಟೀಲ ಕಿಡಿ ಕಾರಿದ್ದಾರೆ.
ನನ್ನ ಹತ್ತಿರ 27 ಜನರ ವಿವರ ಹಾಗೂ ಫೋನ್ ನಂಬರ್ ಇವೆ. ಅವರನ್ನು ಮಾತನಾಡಿಸಿದರೆ ಜಮೀರ್ ಅವರ ಇಲಾಖೆಯ ಬಗ್ಗೆ ತಿಳಿಯುತ್ತೆ. ಏನೆಲ್ಲ ಅಕ್ರಮ ನಡೆಯುತ್ತಿದೆ ಅನ್ನೋದು ತಿಳಿಯಲಿದೆ. ಜಮೀರ್ ಅಹ್ಮದ್ ಯಾವ ದೊಡ್ಡ ಮನುಷ್ಯ. ಸುರ್ಜೇವಾಲ್ ಹತ್ತಿರ ಎಲ್ಲವನ್ನೂ ಹೇಳಿದ್ದೇನೆ. ನೊಂದವರ ಜನರನ್ನು ಮಾತನಾಡಿಸಿದರೆ ತಿಳಿಯುತ್ತೆ ಎಂದು ಶಾಸಕ ಬಿ.ಆರ್ ಪಾಟೀಲ ಹೇಳಿದ್ದಾರೆ.