Ad imageAd image

84 ಕುಟುಂಬಗಳಿಗೆ ಶಾಸಕರು ನ್ಯಾಯ ಕೊಡಿಸುತ್ತಾರೆ: ಸುರೇಶ ಪೂಜಾರ

Nagesh Talawar
84 ಕುಟುಂಬಗಳಿಗೆ ಶಾಸಕರು ನ್ಯಾಯ ಕೊಡಿಸುತ್ತಾರೆ: ಸುರೇಶ ಪೂಜಾರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಕೋರ್ಟ್ ಆದೇಶಕ್ಕೆ ತಲೆಬಾಗಿ 842/2 ಸರ್ವೇ ನಂಬರ್ ಜಾಗದಲ್ಲಿನ ಮನೆಗಳನ್ನು ತೆರವು ಮಾಡಲಾಗಿದೆ. ಇದರಲ್ಲಿ ಶಾಸಕ ಅಶೋಕ ಮನಗೂಳಿಯವರ ಯಾವುದೇ ರೀತಿಯ ಪಾತ್ರವಿಲ್ಲ. ಈ ಘಟನೆಯ ಬಗ್ಗೆ ಪಕ್ಷಾತೀತವಾಗಿ ಎಲ್ಲರಿಗೂ ನೋವಾಗಿದೆ. ಆದರೆ, ಬಿಜೆಪಿಯವರು ಮಾಡುತ್ತಿರುವ ಆರೋಪಗಳು ನೋವು ತರುವಂತದ್ದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ ಹೇಳಿದರು. ಪಕ್ಷದ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಯಜಮಾನ ಶಾಸಕ ಇದಕ್ಕೆ ಕಾರಣ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದ್ದಾರೆ. 2 ವರ್ಷದ ಮನೆ ಯಜಮಾನ ಕಡೆ ಬೊಟ್ಟು ಮಾಡುವ ನೀವು, 12 ವರ್ಷ ಇದೆ ಮನೆಗೆ ಯಜಮಾನರಾಗಿದ್ದೀರಿ. ಆಗ ನಿಮ್ಮ ಕಣ್ಣಿಗೆ ನ್ಯಾಯ ಕಾಣಲಿಲ್ಲವಾ ಎಂದು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಶಾಸಕ ಅಶೋಕ ಮನಗೂಳಿಯವರು ಎಷ್ಟೊಂದು ಪ್ರಯತ್ನ ಮಾಡಿದ್ದಾರೆ ಅನ್ನೋದು ನಮಗೆ ಗೊತ್ತು. ಆದರೆ, ಇಂತಹ ಮನುಷ್ಯನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರಲ್ಲ ಅನ್ನೋ ನೋವಿದೆ. ಆದರೆ, ಒಂದು ಮಾತು ಸತ್ಯ, 84 ಕುಟುಂಬಗಳಿಗೆ ನ್ಯಾಯವನ್ನು ಕೊಡಿಸಿಯೇ ಕೊಡಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಆದರೆ, ಪ್ರತಿಭಟನೆ ಕುಳಿತ ಜನರಿಗೆ ತಪ್ಪು ಮಾತುಗಳ ಮೂಲಕ ದಿಕ್ಕು ತಪ್ಪಿಸಲಾಗುತ್ತಿದೆ. ಕೋರ್ಟ್ ಗೆ ತಲೆಬಾಗಿಲೇ ಬೇಕು ಅನ್ನೋದು ವಾಸ್ತವ. ಅದನ್ನು ದಯವಿಟ್ಟು ಅರ್ಥಮಾಡಿಕೊಳ್ಳಬೇಕು ಎಂದರು.

ದಲಿತ ಮುಖಂಡ ವೈ.ಸಿ ಮಯೂರ ಮಾತನಾಡಿ, ನ್ಯಾಯಾಲಯದ ಆದೇಶವನ್ನು ಈ ದೇಶದ ಪ್ರಧಾನಿಯೂ ಮೀರುವಂತಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕು. ಆದ್ರೆ, ಬಿಜೆಪಿಯವರು ಪ್ರತಿಭಟನೆ ಕುಳಿತ ಜನರಿಗೆ ಸುಳ್ಳು ಮಾತುಗಳನ್ನು ಹೇಳುತ್ತಿದ್ದಾರೆ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಶಾಸಕರ ಮೇಲೆ ಭರವಸೆ ಇಟ್ಟುಕೊಳ್ಳಿ. ನೀವು ಮತ್ತೊಂದು ಜಾಗವನ್ನು ಎಲ್ಲಿಯಾದರೂ ತೋರಿಸಿ ಅದನ್ನು ನಿಮಗೆ ಕೊಡಿಸುವ ಕೆಲಸ ಮಾಡುತ್ತಾರೆ ಎಂದರು. ಈ ವೇಳೆ ಕೆಡಿಪಿ ಜಿಲ್ಲಾ ಸದಸ್ಯ ನೂರ್ ಅಹ್ಮದ್ ಅತ್ತರ ಅವರು ಮಾತನಾಡಿದರು. ಕಾಂಗ್ರೆಸ್ ಮುಖಂಡ ಎಂ.ಎ ಖತೀಬ್ ಸೇರಿ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article