ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಹನಿಟ್ರ್ಯಾಪ್ ನಡೆಸಲಾಗಿದೆ ಎನ್ನುವ ಗಂಭೀರ ಆರೋಪವನ್ನು ಮಾಡಿರುವ ಸಹಕಾರ ಸಚಿವ ಕೆ.ಎನ್ ರಾಜಣ್ಣ ಪುತ್ರ, ಎಂಎಲ್ಸಿ ರಾಜೇಂದ್ರ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ತಮ್ಮ ಮೇಲೆ ಕೊಲೆ ಯತ್ನ ನಡೆದಿತ್ತು ಎಂದಿದ್ದಾರೆ. ಈ ಕುರಿತು ಡಿಜಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನವೆಂಬರ್ ತಿಂಗಳಲ್ಲಿ ಕೊಲೆ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.
ನವೆಂಬರ್ 16ರಂದು ಮಗಳ ಹುಟ್ಟು ಹಬ್ಬವಿದ್ದು, ನವೆಂಬರ್ 15ರಂದು ಶಾಮಿಯಾನ್ ಹಾಕಲು ಬಂದಿದ್ದವರ ಜೊತೆಗೆ ಕೊಲೆಗಾರರು ಮನೆ ಬಳಿ ಬಂದಿದ್ದರು. ಭರತ್ ಹಾಗೂ ಸೋಮ ಎಂಬ ಇಬ್ಬರು 5 ಲಕ್ಷ ರೂಪಾಯಿ ಪಡೆದುಕೊಂಡು ನನ್ನ ಕೊಲೆಗೆ ಸುಪಾರಿ ಪಡೆದಿದ್ದಾರೆ. ಇದಕ್ಕೆ ಆಡಿಯೋ ಸಾಕ್ಷಿಯಾಗಿದೆ. ಇದು ಜನವರಿಯಲ್ಲಿ ತಿಳಿಯಿತು. ಆದರೂ ನಾನು ಎಲ್ಲಿಯೂ ಹೇಳಿಲ್ಲ. ಈಗಿನ ರಾಜಕೀಯ ಬೆಳವಣಿಗೆಯಿಂದ ದೂರು ನೀಡಿದ್ದೇನೆ. ಆಡಿಯೋವನ್ನು ಡಿಜಿ ಅವರಿಗೆ ಕೊಟ್ಟಿದ್ದು, ಅವರು ತುಮಕೂರು ಎಸ್ಪಿಗೆ ನೀಡಲು ಸೂಚಿಸಿದ್ದಾರೆ ಎಂದು ಎಂಎಲ್ಸಿ ರಾಜೇಂದ್ರ ಹೇಳಿದ್ದಾರೆ.