Ad imageAd image

ಮೋದಿಯ ಮೇಕ್ ಇನ್ ಇಂಡಿಯಾ ವಿಫಲವಾಗಿದೆ: ರಾಹುಲ್ ಗಾಂಧಿ

Nagesh Talawar
ಮೋದಿಯ ಮೇಕ್ ಇನ್ ಇಂಡಿಯಾ ವಿಫಲವಾಗಿದೆ: ರಾಹುಲ್ ಗಾಂಧಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಸಂಸತ್ ಬಜೆಟ್ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಸೋಮವಾರ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡಿದರು. ಬಜೆಟ್ ನಲ್ಲಿ ಹೊಸದೇನೂ ಇಲ್ಲ. ಎಲ್ಲವೂ ಹಳೆಯ ಪಟ್ಟಿಯಿದೆ. ಚೀನಾ ಆಕ್ರಮಣದಿಂದಾಗಿ ಮೋದಿಯವರ ಮೇಕ್ ಇನ್ ಇಂಡಿಯಾ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

2014ರಲ್ಲಿ ಜಿಡಿಪಿ ಶೇಕಡ 15.3ರಷ್ಟು ಇತ್ತು. ಇದೀಗ 12.6ಕ್ಕೆ ಇಳಿದಿದೆ. ಕಳೆದ 60 ವರ್ಷಗಳಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಆಗಿರುವ ಅತ್ಯಂತ ಕಡಿಮೆ ಪಾಲಾಗಿದೆ. ಮೇಕ್ ಇನ್ ಇಂಡಿಯಾ ಒಳ್ಳೆಯ ಕಲ್ಪನೆಯಾಗಿತ್ತು. ಅದನ್ನು ಯಶಸ್ವಿಗೊಳಿಸುವಲ್ಲಿ ಪ್ರಧಾನಿ ಮೋದಿಯವರು ವಿಫಲರಾಗಿದ್ದಾರೆ. ಯಾಕಂದರೆ ಚೀನಾ ಉತ್ಪಾದನೆಗಳ ಮೇಲೆ ಸಾಕಷ್ಟ ಅವಲಂಬನೆಯಾಗಿರುವುದು. ಮತ್ತೆ ಭಾರತದ ಉತ್ಪಾದನಾ ವಲಯವನ್ನು ಚೀನಾಗೆ ಬಿಟ್ಟುಕೊಡುವ ಪರಿಸ್ಥಿತಿಯಾಗಲಿದೆ ಎನ್ನುವ ಚಿಂತಿಯಿದೆ ಎಂದು ಹೇಳಿದರು.

WhatsApp Group Join Now
Telegram Group Join Now
Share This Article