ಪ್ರಜಾಸ್ತ್ರ ಸುದ್ದಿ
ವಾಷಿಂಗ್ಟನ್(Washington): ಭಾರತದಿಂದ ಆಮದು ಆಗುವ ಸರಕುಗಳ ಮೇಲೆ ಹೆಚ್ಚುವರಿ ಶೇಕಡ 25ರಷ್ಟು ಸುಂಕುವನ್ನು ಅಮೆರಿಕ ವಿಧಿಸಿದೆ. ಯುಎಸ್ ಅಧ್ಯಕ್ಷ ಟ್ರಂಪ್ ಈ ಬಗ್ಗೆ ಹೇಳಿದ ಜೊತೆಯಲ್ಲಿಯೇ ಶ್ವೇತಭವನದ ವಾಣಿಜ್ಯ ಸಲಹೆಗಾರ ಪೀಟರ್ ನವಾರೋ, ರಷ್ಯಾಗೆ ಭಾರತ ಆರ್ಥಿಕ ನೆರವು ನೀಡುತ್ತಿದೆ. ಉಕ್ರೇನ್ ನಲ್ಲಿ ನಡೆಯುತ್ತಿರುವ ಸಂಘರ್ಷ ಮೋದಿ ಯುದ್ಧ ಎಂದು ಆರೋಪಿಸಿದ್ದಾರೆ.
ಶಾಂತಿ ಮಾರ್ಗ ಬಹುತೇಕ ಭಾರತದಿಂದ ಸಾಗುತ್ತದೆ. ರಿಯಾತಿ ದರದಲ್ಲಿ ರಷ್ಯಾದಿಂದ ಭಾರತ ತೈಲ ಖರೀದಿಸುವ ಮೂಲಕ ಹಣಕಾಸಿನ ನೆರವು ನೀಡುತ್ತಿದೆ. ಇದರಿಂದ ಅಮೆರಿಕಕ್ಕೆ ಹಾನಿ. ಉಕ್ರೇನ್ ಗೆ ಅಮೆರಿಕ ಆರ್ಥಿಕ ನೆರವು ನೀಡಬೇಕಿದೆ. ಹೀಗಾಗಿ ಉಕ್ರೇನ್ ನಲ್ಲಿ ನಡೆಯುತ್ತಿರುವುದು ಮೋದಿ ಯುದ್ಧ. ಭಾರತದ ಕೆಲಸದಿಂದಾಗಿ ಅಮೆರಿಕದಲ್ಲಿರುವ ಎಲ್ಲರಿಗೂ ನಷ್ಟವಾಗುತ್ತಿದೆ ಅಂತಾ ಹೇಳಿದ್ದಾರೆ.