ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಜಿಲ್ಲೆಯಲ್ಲಿ ಏನಾಗುತ್ತಿದೆಯೋ ಗೊತ್ತಿಲ್ಲ. ಇಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಕೊಲೆ, ಹಲ್ಲೆ, ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ತ್ರಿಬಲ್ ಮರ್ಡರ್ ನಡುವೆ ನೈತಿಕ ಪೊಲೀಸಗಿರಿ ಪ್ರಕರಣ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಸಿಬ್ಬಂದಿಯಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರಿಗೆ ಆಟೋ ಸಿಗದೆ ಇರುವುದಕ್ಕೆ ಡ್ರಾಪ್ ಕೊಟ್ಟ ಯುವಕನಿಗೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಲಾಗಿದೆ.
ನಗರದ ಸಂತ್ರಸವಾಡಿ ಹತ್ತಿರ ಈ ಘಟನೆ ಜೂನ್ 25ರಂದು ನಡೆದಿದೆ. ಈಗ ಬೆಳಕಿಗೆ ಬಂದಿದೆ. ಬೈಲಪ್ಪ(21) ಅನ್ನೋ ಯುವಕನ ಮೇಲೆ 10-15 ಮುಸ್ಲಿಂ ಜನರ ಗುಂಪು ಹಲ್ಲೆ ಮಾಡಿದೆ. ಅಲ್ಲದೆ, ಬೆಳ್ಳಿ ಚೈನ್, ಬೈಕ್ ಕೀ, 3,500 ರೂಪಾಯಿ ಕಸಿದುಕೊಂಡು ಹೋಗಿದ್ದಾರೆ ಎಂದು ಸಂತ್ರಸ್ತ ಹೇಳಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.