ಪ್ರಜಾಸ್ತ್ರ ಸುದ್ದಿ
ಸಿಯೊಲ್(South Korea): ಲ್ಯಾಂಡ್ ಆಗುವ ಸಂದರ್ಭದಲ್ಲಿ ವಿಮಾನವೊಂದು ಅಪಘಾತಗೊಂಡು ಬರೋಬ್ಬರಿ 120ಕ್ಕೂ ಹೆಚ್ಚು ಜನರು ಮೃತಪಟ್ಟ ಘಟನೆ ಭಾನುವಾರ ದಕ್ಷಿಣ ಕೊರಿಯಾದ ಮುಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಬ್ಯಾಂಕಕ್ ನಿಂದ ಬಂದಿದ್ದ ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ದುರಂತ ನಡೆದಿದೆ.
ರನ್ ವೇನಲ್ಲಿ ಹೊರಟ್ಟಿದ್ದ ವಿಮಾನ ಗೋಡೆಗೆ ಡಿಕ್ಕಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 6 ಸಿಬ್ಬಂದಿ 170 ಪ್ರಯಾಣಿಕರನ್ನು ಹೊತ್ತುಕೊಂಡು ಬಂದಿತ್ತು. ದುರಂತದ ಬಗ್ಗೆ ಜೆಜು ಏರ್ ಸಂಸ್ಥೆ ಸಿಇಒ ಕಿಮ್ ಇ ಬೇ ಹಾಗೂ ಅಧಿಕಾರಿಗಳು ಕ್ಷಮೆ ಕೋರಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.