Ad imageAd image

ಸಿಂದಗಿ: ಬೆಂಕಿ ಅನಾಹುತಕ್ಕೆ 400ಕ್ಕೂ ಹೆಚ್ಚು ಹತ್ತಿ ಚೀಲಗಳು ಭಸ್ಮ

Nagesh Talawar
ಸಿಂದಗಿ: ಬೆಂಕಿ ಅನಾಹುತಕ್ಕೆ 400ಕ್ಕೂ ಹೆಚ್ಚು ಹತ್ತಿ ಚೀಲಗಳು ಭಸ್ಮ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಆಕಸ್ಮಿಕವಾಗಿ ಬೆಂಕಿ ಬಿದ್ದು ಬರೋಬ್ಬರಿ 400ಕ್ಕೂ ಹೆಚ್ಚು ಹತ್ತಿ ಚೀಲಗಳು ಸುಟ್ಟು ಹೋದ ಘಟನೆ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಶನಿವಾರ ಮುಂಜಾನೆ ಸುಮಾರು 11 ಗಂಟೆ ಸಮಯದಲ್ಲಿ ನಡೆದಿದೆ. ಗ್ರಾಮದಲ್ಲಿನ ಹಳೆಯ ಶಾಲೆಯ ಕೊಠಡಿಯೊಂದರಲ್ಲಿ ಇಟ್ಟಿದ್ದ ಹತ್ತಿ ಚೀಲಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ.

ನಾಗಯ್ಯ ಬುದಯ್ಯ ಮಿಣಜಗಿ ಎಂಬುವರಿಗೆ ಸೇರಿದ ಹತ್ತಿಗಳು ಸುಟ್ಟು ಹೋಗಿವೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದರು. ಈ ವೇಳೆ ಗ್ರಾಮಸ್ಥರು ಸಹ ಸಹಾಯ ಮಾಡಿದರು. ಹತ್ತಿ ಚೀಲಗಳಿಗೆ ಬೆಂಕಿ ಹೇಗೆ ತಗುಲಿತು ಅನ್ನೋದು ತಿಳಿಯದಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ನಷ್ಟವಾಗಿ ರೈತ ನಾಗಯ್ಯ ಮಿಣಜಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

WhatsApp Group Join Now
Telegram Group Join Now
Share This Article