ಪ್ರಜಾಸ್ತ್ರ ಸುದ್ದಿ
ಸೋಲಾಪುರ(Solapura): ಕನಸಿನಲ್ಲಿ ತಾಯಿ ಬಂದು ಯಾಕೆ ಅಸಮಾಧಾನದಿಂದ ಇದೀಯ, ನನ್ನ ಬಳಿ ಬಾ ಎಂದು ಹೇಳಿದಳು. ಹೀಗಾಗಿ ನಾನು ಸಾಯುವ ಬಗ್ಗೆ ಯೋಚಿಸಿದ್ದು ಎಂದು ಹೇಳಿ ಬಾಲಕನೊಬ್ಬ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದಿದೆ. ಶಿವಶರಣ ತಲ್ಕೋಟಿ(16) ಮೃತ ಬಾಲಕನಾಗಿದ್ದಾನೆ. ಕಳೆದ ಮೂರು ತಿಂಗಳ ಹಿಂದೆ ಮೃತ ಬಾಲಕನ ತಾಯಿ ಕಾಮಾಲೆ ರೋಗದಿಂದ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಅವ್ವ ಹೋದಾಗಲೇ ನಾನು ಹೋಗಬೇಕಿತ್ತು. ಚಿಕ್ಕಪ್ಪ, ಅಜ್ಜಿ ಮುಖ ನೋಡಿಕೊಂಡು ಬದುಕಿದ್ದೆ. ಆದರೆ, ನಿನ್ನೆ ಅವ್ವ ಕಾನಸಿನಲ್ಲಿ ಬಂದು ಬಾ ಎಂದು ಹೇಳಿದ್ದು, ನನ್ನ ಸಾವಿಗೆ ನಾನು ಜವಾಬ್ದಾರಿ. ತಂಗಿಯನ್ನು ಸರಿಯಾಗಿ ನೋಡಿಕೊಳ್ಳಿ. ಅಜ್ಜಿಯನ್ನು ಅಪ್ಪನ ಕಳಿಸಬೇಡಿ ಚಿಕ್ಕಪ್ಪ. ಅಜ್ಜಿ, ಚಿಕ್ಕಪ್ಪ ನಾನು ನಿಮಗೆ ಕೃತಜ್ಞನಾಗಿದ್ದೇನೆ. ಯಾಕೆಂದರೆ ನೀವು ನನ್ನನ್ನು ತುಂಬಾ ಮುದ್ದಿಸಿದ್ದೀರಿ. ನನ್ನ ಹೆತ್ತವರಿಗಿಂತ ನೀವು ಹೆಚ್ಚಿಗಿ ಮಾಡಿದ್ದೀರಿ. ಇಂತಿ ನಿಮ್ಮ ಪಿಂಟ್ಯಾ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸೋಲಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.