ಪ್ರಜಾಸ್ತ್ರ ಸುದ್ದಿ
ನೋಯ್ಡಾ(Noida): ವರದಕ್ಷಿಣೆ ಸಲುವಾಗಿ ಮಹಿಳೆಯ ಮೇಲೆ ಹಲ್ಲೆ ಮಾಡಿ, ಬೆಂಕಿ ಹೆಚ್ಚಿ ಕೊಲೆ ಮಾಡಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. 6 ವರ್ಷದ ಪುಟ್ಟ ಮಗು ತನ್ನ ತಾಯಿಯ ಕೆನ್ನೆಗೆ ಹೊಡೆದು ಮೈಮೇಲೆ ಏನೋ ಸುರಿದ ಬೆಂಕಿ ಹಚ್ಚಿದರು ಅನ್ನೋ ಘಟನೆಯನ್ನು ವಿವರಿಸಿದೆ. ಇದು ನಿಜಕ್ಕೂ ಅತ್ಯಂತ ಹೀನ, ಅಮಾನವೀಯ ಕೃತ್ಯವೆಂದು ಆಕ್ರೋಶ ವ್ಯಕ್ತವಾಗಿದೆ. ಸಧ್ಯ ಪತಿಯನ್ನು ಬಂಧಿಸಿದ್ದು, ಇತರರು ನಾಪತ್ತೆಯಾಗಿದ್ದಾರೆ.
ನಿಕ್ಕಿ ಅನ್ನೋ ಮಹಿಳೆ ಮೃತಪಟ್ಟಿದ್ದಾಳೆ. ಈಕೆಯ ಸಹೋದರಿ ಕಾಂಚನಾಳ ಮೇಲೂ ಹಲ್ಲೆ ಮಾಡಲಾಗಿದೆ. 36 ಲಕ್ಷ ರೂಪಾಯಿ ವರದಕ್ಷಿಣೆಗಾಗಿ ಪತಿ, ಅತ್ತೆ, ಮಾವ ಕಿರುಕುಳ ನೀಡುತ್ತಿದ್ದರು. ಅಕ್ಕನ ಕುತ್ತಿಗೆ, ತಲೆಗೆ ಹೊಡೆದಿದ್ದಾರೆ. ಆಸಿಡ್ ಎರೆಚ್ಚಿದ್ದಾರೆ. ನನ್ನಿಂದ ಏನೂ ಮಾಡಲು ಆಗಲಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.