ಪ್ರಜಾಸ್ತ್ರ ಸುದ್ದಿ
ಬೀದರ(Bidara): ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲು ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಕರೆ ಕೊಟ್ಟಿದೆ. ಈ ಬಗ್ಗೆ ಸಂಸದ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಮಹಾತ್ಮ ಗಾಂಧಿ ಅಂತರಾತ್ಮದಲ್ಲಿರುವ ಹೆಸರನ್ನೇ ಯೋಜನೆಗೆ ಇಟ್ಟಿದ್ದೇವೆ. ರಾಮನ ವಿಚಾರವನ್ನು ಗಾಂಧೀಜಿಯವರು ಜೀವನಪೂರ್ತಿ ಹೇಳಿದರು. ಕೊನೆಗಳಿಯಲ್ಲಿಯೂ ರಾಮನ ಹೆಸರು ಹೇಳಿದರು ಅಂತಾ ಹೇಳಿದರು.
ಗಾಂಧೀಜಿಯನ್ನು ಒಂದು ಬಾರಿ ಅಲ್ಲ ಹಲವು ಬಾರಿ ಕೊಂದಿದ್ದು ಕಾಂಗ್ರೆಸ್. ಗಾಂಧಿ ಪ್ರಜಾತಂತ್ರ ಹಾಗೂ ಸಂವಿಧಾನ ಒಪ್ಪಿಕೊಂಡಿದ್ದರು. ಆದರೆ, ಅದಕ್ಕೆ ಅಪಚಾರ ಎಸಗಿ ತುರ್ತು ಪರಿಸ್ಥಿತಿಯನ್ನು ಹೇರಿ ಮತ್ತೊಮ್ಮೆ ಕೊಲೆ ಮಾಡಲಾಯಿತು. ಕಾಂಗ್ರೆಸ್ ನವರು ಚುನಾವಣೆ ಬಂದಾಗ ಗಾಂಧಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಮಹಾತ್ಮ ಗಾಂಧಿಯವರಿಗೆ ಎಂದಿಗೂ ಅಷ್ಟೇ ಗೌರವ ಇದೆ ಎಂದರು.




