ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ವಿಜಯಪುರ ಲೋಕಸಭಾ ಸಂಸದರಾದ ರಮೇಶ ಜಿಗಜಿಣಗಿ ಅವರು ಕೇಂದ್ರ ರೇಲ್ವೆ ಖಾತೆ ಸಚಿವರಾದ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ ಜಿಲ್ಲೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಸಲ್ಲಿಸಿ ಮನವಿ ಮಾಡಿಕೊಂಡಿದ್ದಾರೆ.
ಮಂಗಳವಾರ ರೇಲ್ವೆ ಸಚಿವರನ್ನು ಭೇಟಿ ಮಾಡಿ 6535/36 ಗೋಳಗುಮ್ಮಟ ಎಕ್ಸಪ್ರೆಸ್ ಸೂಪರ್ ಫಾಸ್ಟ್ ಪರಿವರ್ತಿಸುವುದು, ಪ್ರತಿದಿನ 20657/20658 ಹುಬ್ಬಳ್ಳಿ ದೆಹಲಿ ಹಾಗೂ 17323/17324 ಹುಬ್ಬಳ್ಳಿ ವಾರಣಸಿ ದಿನ ಪ್ರತಿ ಮಾಡುವುದು ಮತ್ತು ವಿಜಯಪುರ ಮಂಗಳೂರು ಹಾಗೂ ವಿಜಯಪುರ ಯಶವಂತಪುರ ತಾತ್ಕಾಲ್ ರೈಲುಗಳನ್ನು ಖಾಯಂ ಮಾಡಿ ಓಡಿಸುವ ಬೇಡಿಕೆಯನ್ನು ಸಲ್ಲಿಸಿದ್ದು, ಈ ಬೇಡಿಕೆಗೆ ರೇಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಶೀಘ್ರದಲ್ಲಿ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.