ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಸುನೀಲ್ ಬೋಸ್(Sunil bose), ಚಾಮುಂಡೇಶ್ವರಿ ದೇವರ ದರ್ಶನಕ್ಕೆ ಬಂದಾಗ, ಮಹಿಳಾ ಕೆಎಎಸ್ ಅಧಿಕಾರಿ ಹೆಣೆಗೆ ಕುಂಕಮ ಹಚ್ಚಿದ್ದು ಇದೀಗ ಭಾರೀ ವಿವಾದ ಪಡೆದುಕೊಂಡಿದೆ. ಸಂಸದರ ನಡೆಯನ್ನು ಬಿಜೆಪಿ ಸೇರಿದಂತೆ ಸಾರ್ವಜನಿಕರು ಸಹ ಖಂಡಿಸುತ್ತಿದ್ದಾರೆ. ಪಕ್ಕದಲ್ಲಿ ನಿಂತಿದ್ದ ಕೆಎಎಸ್ ಅಧಿಕಾರಿ(ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ) ಸವಿತಾ ಅವರ ಹೆಣೆಗೆ ಕುಂಕುಮ ಹಚ್ಚಿದ್ದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಆಶಾಢ ಮಾಸದ ಮೂರನೇ ಶುಕ್ರವಾರ ಸಂಸದ ಸುನೀಲ್ ಬೋಸ್ ಹಾಗೂ ಕೆಎಎಸ್ ಅಧಿಕಾರಿ ಸವಿತಾ ಜೊತೆಯಾಗಿ ಚಾಮುಂಡಿ(Chamunddi Betta) ಬೆಟ್ಟಕ್ಕೆ ಬಂದಿದ್ದರು. ಗುರ್ಭಗುಡಿಯಲ್ಲಿ ನಿಂತು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪಕ್ಕದಲ್ಲಿ ನಿಂತಿದ್ದ ಸವಿತಾ ಅವರ ಹೆಣೆಗೆ ಹೆಗಲ ಮೇಲೆ ಕೈ ಹಾಕಿ ಕುಂಕಮ ಹಚ್ಚಿದ್ದಾರೆ. ಇದನ್ನು ಸುನೀಲ್ ಬೋಸ್ ತಂದೆ, ಸಚಿವ ಹೆಚ್.ಸಿ ಮಹಾದೇವಪ್ಪ(HC Mahadevappa) ಸಮರ್ಥನೆ ಮಾಡಿಕೊಂಡಿದ್ದು, ಅಧಿಕಾರಿಗೆ ಕುಂಕಮ ಹಚ್ಚಿದ್ದರಲ್ಲಿ ತಪ್ಪೇನಿದೆ? ಹಿಂದೂ ಸಂಪ್ರದಾಯದಲ್ಲಿ ಸಮಾನತೆ ಇದೆ. ನನ್ನ ಮಗನಿಗೆ ಮದುವೆ ಆಗಿದೆಯೊ ಇಲ್ಲವೋ ಅನ್ನೋದು ಅಫಿಡವಿಟ್ ನಲ್ಲಿ ನೋಡಿಕೊಳ್ಳಲಿ ಎಂದು ಬಿಜೆಪಿಯವರ ವಿರುದ್ಧ ಕಿಡಿ ಕಾರಿದ್ದಾರೆ.
ಸುನೀಲ್ ಬೋಸ್ ಅವರಿಗೆ ಸವಿತಾ ಜೊತೆಗೆ ಮದುವೆಯಾಗಿದೆ. ಅವರಿಗೆ 6 ವರ್ಷದ ಮಗಳಿದ್ದಾಳೆ ಎಂದು ಬಿಜೆಪಿಯವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆರೋಪಿಸಿದ್ದರು. ಚುನಾವಣೆಯ ವೇಳೆ ತಮಗೆ ಮದುವೆಯಾಗಿಲ್ಲವೆಂದು ಸುಳ್ಳು ಹೇಳಿದ್ದಾರೆ. ಈಗಿರುವ ಫೋಟೋವನ್ನು ಮುಂದಿಟ್ಟುಕೊಂಡು ಮತ್ತೆ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲು ಸಿದ್ಧವಾಗಿದೆ. ಇನ್ನು ಸಾರ್ವಜನಿಕರು ಸಹ ಇದನ್ನು ಖಂಡಿಸಿದ್ದಾರೆ. ಸಾರ್ವಜನಿಕವಾಗಿ ಪರಸ್ತ್ರೀಯ ಹೆಣೆಗೆ ಹೀಗೆ ಹೆಗಲ ಮೇಲೆ ಕೈ ಹಾಕಿ ಕುಂಕಮ ಹಚ್ಚಲು ಹೇಗೆ ಸಾಧ್ಯ? ಇದರ ಹಿಂದಿನ ಸತ್ಯವೇನು? 42 ವರ್ಷದ ಸುನೀಲ್ ಬೋಸ್ ನಿಜಕ್ಕೂ ಇನ್ನೂ ಮದುವೆಯಾಗಿಲ್ಲವಾ? ಸವಿತಾ ಅವರೊಂದಿಗನ ಮದುವೆ ಆರೋಪದ ಕಥೆ ಏನೆಂದು ಪ್ರಶ್ನಿಸುತ್ತಿದ್ದಾರೆ.