Ad imageAd image

ಮುದ್ದೇಬಿಹಾಳ, ಸಿಂದಗಿ ಸೇರಿ ವಿವಿಧೆಡೆ ಪ್ರಜಾಪ್ರಭುತ್ವ ವನ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಪ್ರಜಾಪ್ರಭುತ್ವ ವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸೆಪ್ಟೆಂಬರ್ 15ರಂದು  ಜಿಲ್ಲೆಯಾದ್ಯಂತ ವಿವಿಧ ಕ್ಷೇತ್ರದ 28.50 ಹೆಕ್ಟೇರ್ ಪ್ರದೇಶದಲ್ಲಿ

Nagesh Talawar
ಮುದ್ದೇಬಿಹಾಳ, ಸಿಂದಗಿ ಸೇರಿ ವಿವಿಧೆಡೆ ಪ್ರಜಾಪ್ರಭುತ್ವ ವನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ(International Democracy Day) ದಿನದ ಅಂಗವಾಗಿ ಪ್ರಜಾಪ್ರಭುತ್ವ ವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸೆಪ್ಟೆಂಬರ್ 15ರಂದು  ಜಿಲ್ಲೆಯಾದ್ಯಂತ ವಿವಿಧ ಕ್ಷೇತ್ರದ 28.50 ಹೆಕ್ಟೇರ್ ಪ್ರದೇಶದಲ್ಲಿ 30 ಸಾವಿರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.    ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ವಿಭಾಗದಿಂದ ಸಸಿಗಳನ್ನು ನೆಡಲು ಜಿಲ್ಲೆಯ ವಿವಿಧ ಸ್ಥಳಗಳನ್ನು ಆಯ್ಕೆ ಮಾಡಲಾಗಿದ್ದು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ಹಾಗೂ ಸಾಮಾನ್ಯ ನಾಗರಿಕರಿಂದ ವಿವಿಧ ಕ್ಷೇತ್ರಗಳಲ್ಲಿ ಸಸಿ ನೆಡುವುದರೊಂದಿಗೆ ಆಯಾ ಕ್ಷೇತ್ರಗಳನ್ನು ಅರ್ಪಣೆ ಮಾಡುವ ಮೂಲಕ  ಜಿಲ್ಲೆಯಾದ್ಯಂತ ಪ್ರಜಾಪ್ರಭುತ್ವ ವನ ನಿರ್ಮಾಣಕ್ಕೆ ಜಿಲ್ಲಾಡಳಿತ ವಿನೂತನವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 4.50 ಹೆಕ್ಟೇರ್ ಪ್ರದೇಶದಲ್ಲಿ 2,950 ಸಸಿಗಳನ್ನು ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರಿಂದ  ನೆಡುವ ಮೂಲಕ ಈ ಕ್ಷೇತ್ರವನ್ನು ಶಾಸಕಾಂಗ  ಕ್ಷೇತ್ರಕ್ಕೆ ಅರ್ಪಣೆ ಮಾಡಲಾಗುವುದು. ಸಿಂದಗಿ ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ 4 ಹೆಕ್ಟೇರ್ ಪ್ರದೇಶದಲ್ಲಿ 3,200 ಸಸಿಗಳನ್ನು ಶಾಸಕರು ಹಾಗೂ ಅಧಿಕಾರಿಗಳಿಂದ ನೆಡುವ ಮೂಲಕ ಕಾರ್ಯಾಂಗ  ಕ್ಷೇತ್ರಕ್ಕೆ ಅರ್ಪಣೆ ಮಾಡಲಾಗುವುದು. ಕೊಲ್ಹಾರ ತಾಲೂಕಿನ ಕೂಡಗಿ ಎನ್‌ಟಿಪಿಸಿ ಪ್ರದೇಶದ 5 ಹೆಕ್ಟೇರ್ ಪ್ರದೇಶದಲ್ಲಿ 15,350 ಸಸಿಗಳನ್ನು ಜಿಲ್ಲಾ ಪ್ರಧಾನ ನ್ಯಾಯಾಧೀಶರು, ಜಿಲ್ಲಾ ವಕೀಲರ ಬಾರ್ ಅಸೋಸಿಯೇಶನ್ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ವಕೀಲರಿಂದ ನೆಡುವ ಮೂಲಕ ಈ ಕ್ಷೇತ್ರವನ್ನು ನ್ಯಾಯಾಂಗ ಕ್ಷೇತ್ರಕ್ಕೆ ಅರ್ಪಣೆ ಮಾಡಲಾಗುವುದು.

ಚಡಚಣ ತಾಲೂಕಿನ ಬಳ್ಳೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5 ಹೆಕ್ಟೇರ್ ಪ್ರದೇಶದಲ್ಲಿ 2,500 ಸಸಿಗಳನ್ನು ಪತ್ರಿಕಾ ಮಾಧ್ಯಮದವರಿಂದ ನೆಡುವ ಮೂಲಕ ಪತ್ರಿಕಾ ಮಾಧ್ಯಮದವರಿಗೆ ಈ ಕ್ಷೇತ್ರವನ್ನು ಅರ್ಪಣೆ ಮಾಡಲಾಗುವುದು. ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 10 ಹೆಕ್ಟೇರ್  ಪ್ರದೇಶದಲ್ಲಿ 6 ಸಾವಿರ ಸಸಿಗಳನ್ನು ನಾಗರಿಕರಿಂದ ನೆಡುವ ಮೂಲಕ ನಾಗರಿಕರಿಗೆ ಈ ಕ್ಷೇತ್ರವನ್ನು ಅರ್ಪಣೆ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article