Ad imageAd image

ಮುಧೋಳ: ಸ್ವಾತಂತ್ರ್ಯೋತ್ಸ ಸಂಭ್ರಮದಲ್ಲಿ ಮಿಂದೆದ್ದ ಪುಟಾಣಿಗಳು

ನಗರದ ಮೃತ್ಯುಂಜಯ ವಿರಕ್ತಮಠ ಪ್ರಾಥಮಿಕ ಶಾಲೆಯಲ್ಲಿ ಪುಟಾಣಿಗಳು ಸ್ವಾತಂತ್ರ್ಯೋತ್ಸವ ಹಬ್ಬವನ್ನು ತುಂಬಾ ವಿಶೇಷವಾಗಿ ಆಚರಣೆ ಮಾಡಿದರು.

Nagesh Talawar
ಮುಧೋಳ: ಸ್ವಾತಂತ್ರ್ಯೋತ್ಸ ಸಂಭ್ರಮದಲ್ಲಿ ಮಿಂದೆದ್ದ ಪುಟಾಣಿಗಳು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮುಧೋಳ(Mudhola): ನಗರದ ಮೃತ್ಯುಂಜಯ ವಿರಕ್ತಮಠ ಪ್ರಾಥಮಿಕ ಶಾಲೆಯಲ್ಲಿ ಪುಟಾಣಿಗಳು ಸ್ವಾತಂತ್ರ್ಯೋತ್ಸವ ಹಬ್ಬವನ್ನು ತುಂಬಾ ವಿಶೇಷವಾಗಿ ಆಚರಣೆ ಮಾಡಿದರು. 78ನೇ ಸ್ವತಂತ್ರ ದಿನಚಾರಣೆ ಪ್ರಯಕ್ತ ಗವಿಮಠದ ಶ್ರೀಗಳ ಸೇರಿ ಶಾಲೆಯ ಶಿಕ್ಷಕರು ಧ್ವಜಾರೋಹಣ ನೆರವೇರಿಸಿದರು. ಶ್ರೀಗಳು ಮಕ್ಕಳಿಗೆ ದೇಶದ ಸ್ವತಂತ್ರಕ್ಕಾಗಿ ಹೋರಾಡಿ ವೀರ ಮರಣ ಹೊಂದಿದ ಹೋರಾಟಗಾರರ ಬಗ್ಗೆ ಹೇಳಿದರು.

ಪುಟ್ಟ ಮಕ್ಕಳ ಕೈಯಲ್ಲಿ ಚಿಕ್ಕ ಚಿಕ್ಕ ಬಾವುಟಗಳೊಂದಿಗೆ ಶಾಲೆಯಲ್ಲಿ ನೃತ್ಯ, ಭಾಷಣ ಹಾಗೂ ವೇಷಭೂಷಣದಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು. ಪುಟಾಣಿ ಕೃತಿಕಾ ವಿಜಯ ಪವಾರ ಇಂಗ್ಲಿಷ್ ನಲ್ಲಿ ಭಾಷಣ ಮಾಡುವುದರೊಂದಿಗೆ ಎಲ್ಲರ ಮೆಚ್ಚುಗೆ ಪಡೆದಳು. ಅಲ್ಲದೆ ಕಾರ್ತಿಕ್ ಪವಾರ ಹಾಗೂ ಕೃತಿಕಾ ಪವಾರ ದೇಶಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು.

WhatsApp Group Join Now
Telegram Group Join Now
Share This Article