ಪ್ರಜಾಸ್ತ್ರ ಸುದ್ದಿ
ಶ್ರೀನಗರ(Sringara): ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್ ಗವಾಯಿಯವರ ಮೇಲೆ ಶೂ ಎಸೆದ ಪ್ರಕರಣವನ್ನು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಖಂಡಿಸಿದ್ದು, 2047ರ ಬಿಜೆಪಿಯ ವಿಕಸಿತ ಭಾರತದ ಭಯಾನಕ ಚಿತ್ರಣ. ಯಾವುದೇ ಪರಿಣಾಮವನ್ನು ಎದುರಿಸುವುದಿಲ್ಲ ಅನ್ನೋ ವಿಶ್ವಾಸದಿಂದಲೇ ಆತ ಶೂ ಎಸೆದಿದ್ದಾನೆ ಎಂದಿದ್ದಾರೆ.
ಗೋಡ್ಸೆ ಭಾರತದಲ್ಲಿ ಗುಂಪು ಹಲ್ಲೆ ನಡೆಸುವವರಿಗೆ ಹಾರ ಹಾಕುವುದು, ಅತ್ಯಾಚಾರಿಗಳಿಗೆ ಕ್ಷಮಿಸುವುದು ಹಾಗೂ ದ್ವೇಷ ಹರಡುವರನ್ನು ಸನ್ಮಾನಿಸುವುದು ಸಾಮಾನ್ಯ ಸಂಗತಿ. ಆದರೆ, ಈಗ ನ್ಯಾಯಾಲಯದ ಮುಂದೆಯಿರುವ ಪ್ರಶ್ನೆ ಕಾನೂನಿಗೆ ಸಂಬಂಧಿಸಿದ್ದಲ್ಲ, ಅಸ್ತಿತ್ವದ ಪ್ರಶ್ನೆಯಾಗಿದೆ. ತನ್ನ ಕೃತ್ಯದಿಂದ ಶಿಕ್ಷೆಯಾಗುವುದಿಲ್ಲವೆಂದು ತಿಳಿದಿದ್ದರಿಂದಲೇ ಶೂ ಎಸೆದಿದ್ದಾನೆ ಅಂತಾ ಹೇಳಿದ್ದಾರೆ.