ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಅವನಿಗೆ ಮೂವರು ಮಕ್ಕಳಿದ್ದಾರೆ ಜೊತೆಗೆ ಪತ್ನಿ ಗರ್ಭಿಣಿ. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ ಅವರು ಅಕ್ರಮ ಸಂಬಂಧ ಹೊಂದಿದ್ದರು. ಅದು ಇದೀಗ ದುರಂತದಲ್ಲಿ ಅಂತ್ಯವಾಗಿದೆ. ಆಕೆಯನ್ನು ಹತ್ಯೆ ಮಾಡಿ, ಆತನು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ.
ಆನಂದ ಸುತಾರ ಹಾಗೂ ರೇಷ್ಮಾ ತಿರವೀರ ಪ್ರಾಣ ಕಳೆದುಕೊಂಡ ಜೋಡಿಯಾಗಿದೆ. ಗುರುವಾರ ರಾತ್ರಿ ರೇಷ್ಮಾಳನ್ನು ಹತ್ಯೆ ಮಾಡಿದ ಆನಂದ, ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರಿಬ್ಬರು ಮೃತಪಟ್ಟಿದ್ದಾರೆ. ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.