ಪ್ರಜಾಸ್ತ್ರ ಸುದ್ದಿ
ಸಿಂಧನೂರು(Sindanoru): ಎಂಎಸ್ ಸಿ ಪ್ರಥಮ ಸೆಮಿಸ್ಟರ್ ಓದುತ್ತಿದ್ದ 24 ವರ್ಷದ ವಿದ್ಯಾರ್ಥಿನಿಯನ್ನು(Student) ಕೊಲೆ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ. ಶಿಫಾ ಅಬ್ದುಲ್ ವಾಹೀದ್(24) ಹತ್ಯೆಯಾದ ವಿದ್ಯಾರ್ಥಿನಿಯಾಗಿದ್ದು, ಟೈಲ್ಸ್ ಕೆಲಸ ಮಾಡುತ್ತಿದ್ದ ಮುಬಿನ್ ಕೊಲೆ(Murder) ಮಾಡಿದ ಆರೋಪಿಯಾಗಿದ್ದಾನೆ. ವಿದ್ಯಾರ್ಥಿನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಎಸ್ ಸಿ ಪ್ರಥಮ ಸೆಮಿಸ್ಟರ್ ಓದುತ್ತಿದ್ದಳು.
ಲಿಂಗಸಗೂರು ಮೂಲದ ಶಿಫಾ ಸಾರಿಗೆ ಬಸ್ ಮೂಲಕ ಸಿಂಧನೂರಿಗೆ ಕಾಲೇಜಿಗೆ ಬಂದಿದ್ದಾಳೆ. ಬೈಕ್ ಮೇಲೆ ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಆರೋಪಿ(Accused), ನಿನ್ನ ಹತ್ತಿರ ಮಾತನಾಡುವುದಿದೆ ಎಂದು ಕಾಲೇಜು(College) ಸಮೀಪದ ಗೌತಮಿ ಲೇಔಟ್ ಗೆ ಕರೆದುಕೊಂಡು ಹೋಗಿದ್ದಾನೆ. ಆಗ ಇಬ್ಬರ ನಡುವೆ ಏನಾಗಿದೆಯೋ ಗೊತ್ತಿಲ್ಲ, ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಲಿಂಗಸಗೂರು ಠಾಣೆಗೆ ಹೋಗಿ ಶರಣಾಗಿದ್ದಾನೆ. ಯುವತಿ ಕುಟುಂಬಸ್ಥರ ಆಕ್ರಂದನ ನೋಡದಾಗಿದೆ.