ಪ್ರಜಾಸ್ತ್ರ ಸುದ್ದಿ
ವಿಜಯನಗರ(Vijayanagara): ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಗುರುವಾರ ಹೊಸಪೇಟೆ ನಗರದ ಭಟ್ರಹಳ್ಳಿ ಆಂಜನೇಯ ದೇವಸ್ಥಾನದ ದ್ವಾರ ಬಾಗಿಲು ಹತ್ತಿರ ನಡೆದಿದೆ. ಬಾಣಗಕೇರೆಯ ರಾಮಲಿ(40) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿದ್ದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಶಂಕಿಸಲಾಗಿದೆ. ನಸುಕಿನ ಜಾವ 2.30ರಿಂದ 3 ಗಂಟೆಯ ನಡುವೆ ಈ ಕೃತ್ಯ ನಡೆದಿದೆಯಂತೆ.
ಮುಂಜಾನೆ ಸಾರ್ವಜನಿಕರು ವಾಕಿಂಗ್ ಗೆ ಬಂದಾಗ ಕೊಲೆಯಾಗಿರುವುದು ತಿಳಿದಿದೆ. ಆಗ ಪೊಲೀಸರಿಗೆ ಮಾಹಿತಿ ಗೊತ್ತಾಗಿದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಕೊಲೆಯಾದ ರಾಮಲಿ ನಗರಸಭೆ ಸದಸ್ಯರೊಬ್ಬರ ಕುಟುಂಬಸ್ಥರು ಎಂದು ಹೇಳಲಾಗುತ್ತಿದೆ. ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.