ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಕಳೆದ ತಡರಾತ್ರಿ ಲಿಂಗರಾಜ ನಗರದಲ್ಲಿ ಯುವಕನೊಬ್ಬನ ಕೊಲೆಯಾಗಿದೆ. ಚಾಕುವಿನಿಂದ ಇರಿದು ಆಕಾಶ್ ವಾಲ್ಮೀಕಿ ಎನ್ನುವ ಯುವಕನನ್ನು ಹತ್ಯೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದು, ಓರ್ವನ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯಗಳಾಗಿವೆ. ಹಳೆ ವೈಷಮ್ಯದ ಕಾರಣಕ್ಕೆ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಪೊಲೀಸ್ ತನಿಖೆಯಿಂದ ಸತ್ಯ ತಿಳಿದು ಬರಲಿದೆ.
ಹತ್ಯೆ ಮಾಡಿದ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಅವರನ್ನು ಪೊಲೀಸರು ಬೆನ್ನು ಹತ್ತಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಎಸ್ಕೇಪ್ ಆಗಲು ನೋಡಿದ್ದಾರೆ. ಆಗ ಗುಂಡಿನ ದಾಳಿ ನಡೆಸಲಾಗಿದೆ. ಎಂಟಿಎಸ್ ಕಾಲೋನಿಯಲ್ಲಿ ಓಡಿದ್ದವರ ಮೇಲೆ ಗುಂಡು ಹಾರಿಸಿದಾಗ ಓರ್ವನ ಕಾಲಿಗೆ ಬಿದ್ದಿದೆ. ವಿನೋದ್, ಯಲ್ಲಪ್ಪ, ಅಭಿಷೇಕ್ ಬಂಧಿತರು. ಉಳಿದವರ ಶೋಧ ಕಾರ್ಯ ನಡೆದಿದೆ ಎಂದ ಹುಬ್ಬಳ್ಳ-ಧಾರವಾಡ ಪೊಲೀಸ್ ಆಯಕ್ತರಾದ ಎನ್.ಶಶಿಕುಮಾರ್ ಅವರು ತಿಳಿಸಿದ್ದಾರೆ.