ಪ್ರಜಾಸ್ತ್ರ ಸುದ್ದಿ
ಕೊಲ್ಕತ್ತಾ(Kolkata): ಇಲ್ಲಿನ ಆರ್.ಜೆ ಕಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ಸಂಜಯ್ ರಾವ್ ದೋಷಿ ಎಂದು ಕೋರ್ಟ್ ಶನಿವಾರ ತೀರ್ಪು ನೀಡಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ತೀರ್ಪು ನೀಡಿದ್ದು, ಸೋಮವಾರ ಶಿಕ್ಷೆಯನ್ನು ಪ್ರಕಟಿಸಲಿದೆ ಹಾಗೂ ಇದಕ್ಕೂ ಮೊದಲು ರಾಯ್ ವಿಚಾರಣೆ ನಡೆಯಲಿದೆ.
31 ವರ್ಷದ ವೈದ್ಯೆಯ ಮೇಲೆ ಆಗಸ್ಟ್ 9, 2024ರಂದು ಅತ್ಯಾಚಾರ ನಡೆಸಲಾಗಿತ್ತು ಮತ್ತು ಕೊಲೆ ಮಾಡಲಾಗಿದೆ. ಆಕೆಯ ಮೃತದೇಹ ಸೆಮಿನಾರ್ ಹಾಲ್ ನಲ್ಲಿ ಪತ್ತೆಯಾಗಿತ್ತು. ಇದು ಇಡೀ ದೇಶ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿ, ನಿರಂತರವಾಗಿ ಹೋರಾಟ, ಪ್ರತಿಭಟನೆಗಳು ನಡೆದವು. ಸಾಕ್ಷಿ ನಾಶ ಮಾಡಲು ಯತ್ನಿಸಿದ ಸಂಬಂಧ ಕಾಲೇಜಿನ ಪ್ರಿನ್ಸಿಪಾಲ್ ಸಂದೀಪ್ ಘೋಷ್ ಹಾಗೂ ಪೊಲೀಸ್ ಅಧಿಕಾರಿ ಅಭಿಜಿತ್ ಮೊಂದಾಲ್ ಬಂಧನವಾಯಿತು. ಕೊಲ್ಕತ್ತಾ ಹೈಕೋರ್ಟ್ ತನಿಖೆಯನ್ನು ಸಿಬಿಐಗೆ ವಹಿಸಿಲು ಹೇಳಿತು. ಸಿಬಿಐ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತು. ಕಳೆದ 57 ದಿನಗಳಿಂದ ನಿರಂತರವಾಗಿ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಇಂದು ದೋಷಿ ಎಂದು ತೀರ್ಪು ಪ್ರಕಟಿಸಲಾಗಿದ್ದು, ಜನವರಿ 20, ಸೋಮವಾರ ಶಿಕ್ಷೆ ಪ್ರಕಟಿಸಲಿದೆ.