ಪ್ರಜಾಸ್ತ್ರ ಸುದ್ದಿ
ಬಿಜ್ನೋರ್: ಸಂಸದ ಚಂದ್ರಶೇಖರ್ ಆಜಾದ್ ಗೆ ಕೊಲೆ ಬೆದರಿಕೆ ಬಂದಿದೆ. 10 ದಿನದಲ್ಲಿ ಕೊಲೆ ಮಾಡುತ್ತೇವೆ ಎಂದು ವಾಟ್ಸಪ್ ಮೂಲಕ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಜಾದ್ ಸಮಾಜ್ ಪಕ್ಷದ(ಕಾನ್ಷಿರಾಮ್) ಅಧ್ಯಕ್ಷ ಸಹ ಆಗಿರುವ ಸಂಸದ ಚಂದ್ರಶೇಖರ್ ಆಜಾದ್, ದಲಿತಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ನಗಿನಾ ಠಾಣೆಯಲ್ಲಿ ಕಾರ್ಯಕರ್ತ ಶೇಕ್ ಫರ್ವೇಜ್ ದೂರು ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿ ವಿರುದ್ಧ ವಿವಿಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚಂದ್ರಶೇಖರ್ ಆಜಾದ್ ನಗಿನಾ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.