ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ(Bagalakote): ಸಚಿವ ಎಂ.ಬಿ ಪಾಟೀಲ ವಿರುದ್ಧ ಬಿಜೆಪಿ ಮಾಜಿ ಸಚಿವ ಮುರುಗೇಶ ನಿರಾಣಿ(Murugesh Nirani) ವಾಗ್ದಾಳಿ ನಡೆಸಿದ್ದು, ಮಿಸ್ಟರ್ ಪಾಟೀಲ ಗಾಜಿನ ಮನೆಯಲ್ಲಿ ಕುಳಿತಿದ್ದೀಯಾ ಹುಷಾರ್. ನಿನ್ನ ತಾಟಿನಲ್ಲಿ ಹೆಗ್ಗಣ ಬಿದ್ದಿದೆ. ನಿನ್ನ ರಾಜಕೀಯ ಜೀವನದಲ್ಲಿ 10 ರೂಪಾಯಿಯಷ್ಟೂ ಭ್ರಷ್ಟಾಚಾರ ಮಾಡಿಲ್ಲ ಎಂದು ನಿಮ್ಮ ತಂದೆ, ತಾಯಿ ಮೇಲೆ ಆಣೆ ಮಾಡು ಎಂದು ಸವಾಲು ಹಾಕಿದ್ದಾರೆ.
ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಜೋಳ ಹತ್ತಿರ ಸಕ್ಕರೆ ಕಾರ್ಖಾನೆ ಮಾಡ್ತೀನೆಂದು ಕಡಿಮೆ ಬೆಲೆಗೆ ಭೂಮಿ ಪಡಿದು ತಮಿಳುನಾಡು ಕಂಪನಿಗೆ ಮಾರಾಟ ಮಾಡೀರಿ. ನನಗೆ ದನ ಕಾಯೋನು ಎಂದು ಟೀಕಿಸಿದ್ದೀರಿ. ನನಗೂ ಅಂತಹ ಪದಗಳು ಬರ್ತಾವ. ಗೌಡಕಿಯ ದರ್ಪ ತೋರಿಸಬ್ಯಾಡ. ಹಿರಿಯರು ಕಟ್ಟಿದ ಬಿಎಲ್ ಡಿಇ ಸಂಸ್ಥೆಯಲ್ಲಿ ಹಾವಾಗಿ ಸೇರಿದಿ. ತಾಕತ್ತಿದ್ದರ ಒಂದು ಸಂಸ್ಥೆ ಕಟ್ಟಿ ತೋರಿಸುವ. ನಿನಗಿಂತ 15 ವರ್ಷ ಮೊದಲೇ ಕೈಗಾರಿಕೆ ಸಚಿವನಾಗಿದ್ದೀನಿ ಅಂತಾ ತುಂಬಾ ಕಟು ಮಾತುಗಳಿಂದ ಸಚಿವ ಎಂ.ಬಿ(MB Patil) ಪಾಟೀಲ ವಿರುದ್ಧ ಕಿಡಿ ಕಾರಿದ್ದಾರೆ.