ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಭಯೋತ್ಪಾದಕರ ವಿರುದ್ಧ ನಮ್ಮ ವೀರ ಯೋಧರು ಪ್ರಾಣವನ್ನು ಪಣಕ್ಕೆ ಇಟ್ಟು ಹೋರಾಟ ಮಾಡುತ್ತಿರುವಾಗ ನನ್ನ ಜನ್ಮ ದಿನಾಚರಣೆ ಬೇಡ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಮೇ 15ರಂದು ನನ್ನ ಜನ್ಮದಿನದಂದು ನಾನು ಊರಿನಲ್ಲಿ ಇರುವುದಿಲ್ಲ. ಯಾರು ಮನೆಗೆ ಬರಬೇಡಿ ಎಂದು ಮನವಿ ಮಾಡಿದ್ದಾರೆ.
ನಮ್ಮ ಯೋಧರು ಯಶಸ್ವಿಯಾಗಿ ವಾಪಸ್ ಬರಲಿ. ಜನ್ಮ ದಿನಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ ಬ್ಯಾನರ್, ಫ್ಲೆಕ್ಸ್ ಹಾಕಬಾರದು. ಜಾಹೀರಾತು ನೀಡಬಾರದು. ಈ ಸಂದರ್ಭದಲ್ಲಿ ಯಾರೂ ಮನೆಗೆ, ಕಚೇರಿಗೆ ಬರುವುದು ಬೇಡ. ಅಲ್ಲದೆ ಈ ಬಗ್ಗೆ ಯಾರೂ ಅನ್ಯತಾ ಭಾವಿಸಬಾರದು. ದೇಶದ ಐಕ್ಯತೆ ವಿಚಾರದಲ್ಲಿ ನಾವೆಲ್ಲರೂ ಯೋಧರ ಜೊತೆಗೆ ನಿಲ್ಲಬೇಕು ಎಂದು ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.