Ad imageAd image

ನನ್ನ ಹೇರ್ ಸ್ಟೈಲ್ ಇರುವುದೇ ಹೀಗೆ: ಸಚಿವ ಮಧು ಬಂಗಾರಪ್ಪ

Nagesh Talawar
ನನ್ನ ಹೇರ್ ಸ್ಟೈಲ್ ಇರುವುದೇ ಹೀಗೆ: ಸಚಿವ ಮಧು ಬಂಗಾರಪ್ಪ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕೊಪ್ಪಳ(Koppala): ನನ್ನ ಬಗ್ಗೆ ಟೀಕೆ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಹೇರ್ ಸ್ಟೈಟ್ ಮಕ್ಕಳು ಮಾಡಿಕೊಳ್ಳುತ್ತಾರೆ ಎಂದೆಲ್ಲ ಟೀಕೆ ಮಾಡಿದ್ದರು. ನನ್ನ ಹೇರ್ ಸ್ಟೈಲ್ ಇರುವುದೇ ಹೀಗೆ. ಆದರೆ, ವಿದ್ಯಾರ್ಥಿಗಳು 12ನೇ ತರಗತಿ ನಂತರ ಹೇರ್ ಸ್ಟೈಲ್ ಮಾಡಿಕೊಳ್ಳಲಿ. ಈಗ ನನ್ನಂತೆ ಬೇಡ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಡತನ ನಿರ್ಮೂಲನೆಗಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಬಗ್ಗೆ ಪುರುಷರಿಗೆ ಯಾವುದೇ ಬೇಸರವಿಲ್ಲ. ಹಿಂದುತ್ವ ಎಂದು ಮಾತ್ನಾಡುವವರಿಗೆ ಏನು ಗೊತ್ತು. ಹಿಂದೆ ಬಂಗಾರಪ್ಪನವರು ಹಳ್ಳಿಗಳಲ್ಲಿ ದೇವಸ್ಥಾನಕ್ಕೆ ಆರ್ಥಿಕ ಶಕ್ತಿಗಾಗಿ ಆರಾಧಾನ ಯೋಜನೆ ತಂದರು. ಅಜೀಂ ಪ್ರೇಮಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ಹಣ ನೀಡಿದ್ದಾರೆ. ಇವರ್ಯಾರು ಜಾತಿ ನೋಡಿಲ್ಲ ಎಂದರು.

WhatsApp Group Join Now
Telegram Group Join Now
Share This Article