ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಮಾಧ್ಯಮದವರಿಗೆ ನನ್ನ ಮೇಲೆ ಪ್ರೀತಿ ಇದೆಯೋ, ನನ್ನನ್ನು ಮುಗಿಸಬೇಕು ಎನ್ನುವ ಉದ್ದೇಶವಿದೆಯೋ ಗೊತ್ತಿಲ್ಲ. ಪಕ್ಷದಿಂದ ನನ್ನು ಉಚ್ಛಾಟನೆ ಮಾಡುವುದು ಖಚಿತ. ನೋಟಿಸ್ ಕೊಡಲಾಗುವುದು ಎನ್ನುವದೆಲ್ಲ ಮಾಧ್ಯಮದ ವರದಿ. ಇದುವರೆಗೂ ನನ್ನನ್ನು ಯಾಕೆ ಉಚ್ಛಾಟನೆ ಮಾಡಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೇಳಿದರು.
ಯತ್ನಾಳ್ ಉಚ್ಛಾಟನೆ ಮಾಡಬೇಕೆಂದು ಬಿಜೆಪಿ ಕೆಲ ನಾಯಕರು ಹೈಕಮಾಂಡ್ ಗೆ ಆಗ್ರಹಿಸುತ್ತಿದ್ದಾರೆ ಎನ್ನುವ ಮಾಧ್ಯಮದವರಿಗೆ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. ನನ್ನನ್ನು ಯಾಕೆ ಉಚ್ಛಾಟಿಸುತ್ತಿಲ್ಲ ಎಂದು ನಿಮ್ಮ ಮಾಧ್ಯಮಗಳಲ್ಲಿ ವಿಶೇಷ ಪ್ರೋಗ್ರಾಂ ಮಾಡಿ ಎಂದರು. ವಕ್ಫ್ ಮಂಡಳಿ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಬಳಿಕ ಕಿತ್ತೂರು ಕರ್ನಾಟಕಕ್ಕೆ ಬಂದಿದ್ದೇವೆ. ನಾವು ಯಡಿಯೂರಪ್ಪ ಕುಟುಂಬದ ಬಗ್ಗೆ ದೂರು ಕೊಟ್ಟಿಲ್ಲ. ವಕ್ಫ್ ಮಂಡಳಿ ಭೂಕಬಳಕೆ ವಿರುದ್ಧ ಹೋರಾಡುತ್ತಿರುವುದು ತಪ್ಪಾ? ಸೋಮವಾರ ದೆಹಲಿಗೆ ಹೋಗುತ್ತೇವೆ. ಜಂಟಿ ಸಮಿತಿ ಭೇಟಿಯಾಗಿ ವರದಿ ಕೊಡುತ್ತೇವೆ ಅಂತಾ ಹೇಳಿದರು.