ಪ್ರಜಾಸ್ತ್ರ ಸುದ್ದಿ
ಬ್ಯಾಂಕಾಕ್(Bangkok): ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್ ನಲ್ಲಿ 7.7ರಷ್ಟು ತೀವ್ರತೆಯ(Earthquake) ಭೂಕಂಪನವಾಗಿದೆ. ಇದರಿಂದಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದುವರೆಗಿನ ಮಾಹಿತಿ ಪ್ರಕಾರ 1002 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆಯಂತೆ. ಭೂಕಂಪನದಿಂದ ಬೃಹತ್ ಕಟ್ಟಡಗಳು, ಸೇತುವೆಗಳು, ರಸ್ತೆಗಳು ಕುಸಿದಿದ್ದು ಅದರ ಭೀಕರತೆಗೆ ಅಪಾರ ಪ್ರಮಾಣದ ಜೀವ ಹಾನಿಯಾಗಿದ್ದ, ಆರ್ಥಿಕ ನಷ್ಟವೂ ಅಷ್ಟೇ ಆಗಿದೆ.
ಮ್ಯಾನ್ಮಾರ್(Myanmar) ನ 2ನೇ ಅತಿದೊಡ್ಡ ನಗರವಾಗಿರುವ ಮ್ಯಾಂಡಲೆ ಭೂಕಂಪನದ ಕೇಂದ್ರಬಿಂದುವಾಗಿದೆ. ಥಯ್ಲೆಂಡ್(Thailand) ನ ಬ್ಯಾಂಕಕ್ ನಲ್ಲಿ ನಿರ್ಮಾಣ ಹಂತದಲ್ಲಿ 30 ಅಂತಸ್ತಿನ ಸರ್ಕಾರಿ ಕಟ್ಟಡ ಧರೆಗುರುಳಿದೆ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಭಾರತ, ಅಮೆರಿಕಾ, ರಷ್ಯ ಚೀನಾ ದೇಶಗಳು ನೆರವು ನೀಡುವುದಾಗಿ ಘೋಷಿಸಿವೆ. ಭಾರತ 15 ಟನ್ ಪರಿಹಾರ ಸಾಮಗ್ರಿಗಳನ್ನು ಮ್ಯಾನ್ಮರ್ ಗೆ ಭಾರತ ಕಳಿಸಿದೆ.