ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಕ್ರಿಕೆಟ್ ಆಡಲು ಹೋದ ಯುವಕ ಪತ್ತೆಯಾಗಿದ್ದು, ಬೈಕ್ ಅಪಘಾತದಲ್ಲಿ. ಕಳೆದ 20 ದಿನಗಳಿಂದ ಕೋಮ ಸ್ಥಿತಿಯಲ್ಲಿದ್ದು ಯುವಕ ಇಂದು ಮೃತಪಟ್ಟಿದ್ದಾನೆ. ಇತನ ಪೋಷಕರು ಇದು ಕೊಲೆ ಎಂದು ಆರೋಪಿಸಿದ್ದಾರೆ. ಈ ಘಟನೆ ನಡೆದಿರುವುದು ಹೆಚ್.ಡಿ ಕೋಟೆ ತಾಲೂಕಿನ ವಡ್ಡರಗುಡಿ ಗ್ರಾಮದಲ್ಲಿ. ದಿವ್ಯಾಕುಮಾರ್ ಮೃತಪಟ್ಟ ಯುವಕನಾಗಿದ್ದಾನೆ.
ಫೆಬ್ರವರಿ 24ರಂದು ಬೀಚನಹಳ್ಳಿಯಲ್ಲಿ ನೇರಳೆ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ಟೂರ್ನಿ ಆಡಿಸಲಾಗಿದೆ. ಫೈನಲ್ ಪಂದ್ಯದಲ್ಲಿ ಜಿಪಿ ವಾರಿಯರ್ಸ್ ಹಾಗೂ ಡೆವಿಲ್ಸ್ ಸೂಪರ್ ಕಿಂಗ್ಸ್ ತಂಡಗಳು ಎದುರು ಬದರು ಆಗಿವೆ. ಜೆಪಿ ವಾರಿಯರ್ಸ್ ತಂಡದ ಪರ ಆಡಿದ್ದ ದಿವ್ಯಾಕುಮಾರ್ 4 ಬೌಲ್ ಗಳಲ್ಲಿ 20 ರನ್ ಬಾರಿಸಿ ತಂಡದ ಗೆಲುವಿಗೆ ಕಾರಣನಾಗಿದ್ದ. ಪಂದ್ಯ ಗೆದ್ದ ಖುಷಿಯಲ್ಲಿ ಎಲ್ಲರೂ ಪಾರ್ಟಿ ಮಾಡಿದ್ದಾರೆ.
ಮುಂದೆ ಬೈಕ್ ನಲ್ಲಿ ಹೊರಟಿದ್ದ ದಿವ್ಯಾಕುಮಾರ್ ಅಪಘಾತವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೊದೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದಾನಂತೆ. ಕಳೆದ 20 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಇಂದು ಮೃತಪಟ್ಟಿದ್ದಾನೆ. ಕುಟುಂಬಸ್ಥರು ಕೊಲೆ ಎಂದು ಆರೋಪಿಸಿದ್ದಾರೆ. ಪೊಲೀಸ್ ತನಿಖೆ ಬಳಿಕ ಸತ್ಯ ತಿಳಿದು ಬರಲಿದೆ.