ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಮೈಸೂರಿನಿಂದ ತಮಿಳುನಾಡಿನ(Mysore Darbhanga Express) ದರ್ಬಾಂಗ್ ಗೆ ಹೊರಟಿದ್ದ ರೈಲು ಶುಕ್ರವಾರ ರಾತ್ರಿ ಚೆನ್ನೈ-ಗುದ್ದೂರು ವಿಭಾಗದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಇದರ ಪರಿಣಾಮ 30ಕ್ಕೂ ಹೆಚ್ಚು ಜನರಿಗೆ ಸುಟ್ಟ ಗಾಯಗಳಾಗಿವೆ. ಸುಮಾರು 12 ರಿಂದ 13 ಬೋಗಿಗಳು ಹಳಿ ತಪ್ಪಿವೆ ಎಂದು ತಿಳಿದು ಬಂದಿದೆ.
ಪೊನ್ನೇರಿ ರೈಲು ನಿಲ್ದಾಣದ ದಾಟಿದ ಬಳಿಕ ಕವರಾಯಪಟ್ಟೆ ಮಾರ್ಗದ ಮೂಲಕ ಹೋಗಲು ಹಸಿರು ನಿಶಾನೆ ತೋರಿಸಲಾಗಿದೆ. ಚಲಿಸುತ್ತಿದ್ದ ರೈಲು ನಿಲ್ದಾಣ ಪ್ರವೇಶಸಬೇಕು ಎನ್ನುವ ಹೊತ್ತಿನಲ್ಲಿ ಭಾರಿ ಜರ್ಕ್ ಕಂಡು ಬಂದಿದೆ. ಲೈನ್ ಸ್ಪಷ್ಟ ಹಾಗೂ ಸಿಗ್ನಲ್ ಗಳ ಪ್ರಕಾರ ಮುಖ್ಯ ಮಾರ್ಗಕ್ಕೆ ಚಲಿಸುವ ಬದಲು ಲೂಪ್ ಲೈನ್ ಗೆ ಪ್ರವೇಶಿಸಿದೆ. ಆಗ 75 ಕಿಲೋ ಮೀಟರ್ ವೇಗದಲ್ಲಿತ್ತು. ಇದರಿಂದಾಗಿ ಅಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಬಳಿಕ ಸಹಾಯವಾಣಿ ತೆರೆಯಲಾಗಿದೆ. ಮೈಸೂರು ವಿಭಾಗ-9731143981, ಬೆಂಗಳೂರು ವಿಭಾಗ-8861309815, ಚೆನ್ನೈ ವಿಭಾಗ-04425354151, 0442435499 ಇವುಗಳ ಜೊತೆಗೆ ಬೆಂಗಳೂರು, ಕೆಂಗೇರಿ, ಮಂಡ್ಯ ಹಾಗೂ ಮೈಸೂರು ರೈಲು ನಿಲ್ದಾಣಗಳಲ್ಲಿಯೂ ಸಹಾಯಕ ಕೇಂದ್ರ ಸ್ಥಾಪಿಸಲಾಗಿದೆ.