ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ವೈದ್ಯೆ ನಾಗಶ್ರೀ ನಿಗೂಢ ಸಾವಿನ ಪ್ರಕರಣ ದಿನಕ್ಕೊಂದು ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಆರೋಪಿ ಡಾ.ವಿನಯ್ ಕುಮಾರ್ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬಂದಿವೆ. ಆತನ ಅಸಲಿ ಮುಖ ಎಂತದ್ದು ಎಂದು ಮೃತ ಡಾ.ನಾಗಶ್ರೀ ಸ್ನೇಹಿತೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರಂತೆ.
ನಾಗಶ್ರೀ ನನಗಿಂತ ನಾಲ್ಕು ವರ್ಷ ಹಿರಿಯವಳು. ಅವಳ ವಯಸ್ಸು ಹೆಚ್ಚಿರುವುದರಿಂದ ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ. ಸಂಬಂಧಿಕರ ಸಹ ಆಡಿಕೊಳ್ಳುತ್ತಿದ್ದಾರೆ. ಅವಳನ್ನು ನಾನು ಬಿಡುತ್ತೇನೆ. ನೀನು ನನ್ನನ್ನು ಪ್ರೀತಿಸುವ ಎಂದು ಆರೋಪಿ ಡಾ.ವಿನಯ್ ಕುಮಾರ್ ಪೀಡುಸುತ್ತಿದ್ದ ಎಂದು ಮೃತಳ ಸ್ನೇಹಿತೆ ಹೇಳಿದ್ದಾರಂತೆ.
ನಾಗಶ್ರೀಗೆ ಹೆಚ್ಚಿನ ಮಾತ್ರೆಗಳನ್ನು ನೀಡಿದ್ದಾನೆ. ಇನ್ಸುಲಿನ್ ಇಂಜೆಕ್ಟ್ ಮಾಡಿದ್ದಾನೆ. ಅವನು ಮಾತ್ರ ಅಪಾಯವಿಲ್ಲದಷ್ಟು ಕಡಿಮೆ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆಯ ನಾಟಕವಾಡಿದ್ದಾನಂತೆ. ಈತ ಪ್ರಭಾವಿ ವೈದ್ಯನಾಗಿದ್ದು, ತನಿಖೆಯ ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ಪೊಲೀಸರು ತನಿಖೆಯನ್ನು ವಿಳಂಬ ಮಾಡುತ್ತಿದ್ದಾರೆ ಅನ್ನೋ ಆರೋಪವನ್ನು ಮಾಡಲಾಗಿದೆ.




