ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಕಾನೂನು ವಿರೋಧಿ ಕೃತ್ಯಗಳನ್ನು ಮಾಡುವವರನ್ನು ಅಪರಾಧಿಗಳೆಂದು ಹೇಳಲಾಗುತ್ತೆ. ಅಂತವರನ್ನು ಹಿಡಿದು ಕಾನೂನು ಅಡಿಯಲ್ಲಿ ಶಿಕ್ಷೆ ಕೊಡಿಸಬೇಕಾದ ಪೊಲೀಸ್ ಇಲ್ಲಿ ಸ್ವತಃ ತಾನೇ ಕಳ್ಳನ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ. ನಗರದ ಅಶೋಕಪುರಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ರಾಜು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಮನೆಕಳ್ಳತನ(Theft case) ಮಾಡುವ ಕಳ್ಳರಿಂದ ಚಿನ್ನಾಭರಣ ಪಡೆದಿರುವ ರಾಜು, ಅವುಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾನೆ.
ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಮನೆ ಕಳ್ಳತನ ನಡೆದಿದ್ದವು. ಇದರ ತನಿಖೆ ನಡೆಸುತ್ತಿದ್ದ ಪೊಲೀಸರು ಮನೆ ಕಳ್ಳತನ(Thieves) ಮಾಡುತ್ತಿದ್ದ ನಜರುಲ್ಲಾ ಬಾಬು ಹಾಗೂ ಆಲಿ ಎಂಬುವರನ್ನು ಬಂಧಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ತಾವು ಕದ್ದಿದ್ದ 400 ಗ್ರಾಂ ಚಿನ್ನಾಭರಣಗಳಲ್ಲಿ 300 ಗ್ರಾಂ ಚಿನ್ನಾಭರಣವನ್ನು(Gold) ಅಶೋಕಪುರಂ ಪೊಲೀಸ್ ಠಾಣೆ ಹೆಡ್ ಕಾನ್ಸ್ ಟೇಬಲ್ ರಾಜು ಎಂಬುವವರಿಗೆ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ರಾಜು ಮೇಲೆ ಮಂಡಿ ಠಾಣೆ ಪೊಲೀಸರು ಕಣ್ಣಿಟ್ಟಿದ್ದರು.
ಇಂದು 100 ಗ್ರಾಂ ಚಿನ್ನಾಭರಣವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಹೆಡ್ ಕಾನ್ಸ್ ಟೇಬಲ್ ರಾಜುನನ್ನು ಬಂಧಿಸಲಾಗಿದೆ. ಇತ ಈ ಹಿಂದೆಯೂ ಮನೆ ಕಳ್ಳತನ ಮಾಡುವ ಕಳ್ಳರಿಂದ ಚಿನ್ನಾಭರಣ ಪಡೆದಿರುವ ಶಂಕೆ ವ್ಯಕ್ತವಾಗಿದೆ. ಇದೀಗ ಪೊಲೀಸರು ತಮ್ಮದೆ ಇಲಾಖೆಯ ಹೆಚ್.ಸಿ ರಾಜುನನ್ನು ವಿಚಾರಣೆ ನಡೆಸಿದ್ದಾರೆ.