ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಮನೆಯಿಂದ ಶಾಲೆಗೆ ಬಂದ ಮಗುವಿನಲ್ಲಿ ಉತ್ತಮ ಸಂಸ್ಕಾರ ತುಂಬಿ ಪೂರ್ಣಪ್ರಜ್ಞೆನನ್ನಾಗಿ ಮಾಡಿ ಸಮಾಜಕ್ಕೆ ಕೊಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಇನ್ನರ್ ವಿಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಹೇಳಿದರು. ಪಟ್ಟಣದ ಮಾಂಗಲ್ಯಭವನದಲ್ಲಿ ಸೋಮವಾರ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ಕ್ರಿಯೇಟಿವ್ ಕಿಡ್ಸ್ ಹೋಮ್ ವಾರ್ಷಿಕೋತ್ಸವದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರೆಂದರೇ ಶ್ರೇಷ್ಠ ಶಿಲ್ಪಿಗಳಾಗಿದ್ದು ಮಕ್ಕಳಲ್ಲಿ ಸಮಾನತೆ, ವೈಚಾರಿಕತೆ, ದಯೆ ಮುಂತಾದ ರಾಷ್ಟ್ರೋದ್ಧಾರದ ವಿಚಾರಗಳನ್ನು ಬಿತ್ತುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಈ ಶಾಲೆಯ ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆ ಸಂಸ್ಥಾಪಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹ.ಮ. ಪೂಜಾರ ಮಾತನಾಡಿ, ಮಕ್ಕಳಿಗೆ ಸಾಂಪ್ರದಾಯಿಕ ಶಿಕ್ಷಣ ನೀಡುವ ಜೊತೆಗೆ ಅವರ ವ್ಯಕ್ತಿತ್ವ ರೂಪಿಸುವ ಚಟುವಟಿಕೆಗಳನ್ನು ಶಾಲೆ ಹಮ್ಮಿಕೊಳ್ಳಾಗುತ್ತಿದೆ. ಮಕ್ಕಳಿಗೆ ಉನ್ನತ ಶಿಕ್ಷಣ, ಮೌಲ್ಯಾಧಾರಿತ ಸಂಸ್ಕಾರ ಕ್ರೀಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಯವುದು ಶಿಕ್ಷಣ ಸಂಸ್ಥೆಯ ದ್ಯೆಯವಾಗಿದೆ ಎಂದರು.
ಪಾಲಕರ ಪ್ರತಿನಿಧಿಗಳಾದ ಸುಧಾರಾಣಿ ಅಮರಣ್ಣವರ, ಪೃಥ್ವಿ ಮಂಗಳವೇಡಿ, ಅರ್ಚನಾ ಅವಟಿ ಮಾತನಾಡಿ, ಈ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಲಾಗುತ್ತಿದೆ ಎಂದು ಹೇಳಿದರು. ಸಂಸ್ಥೆ ಅಧ್ಯಕ್ಷ ರಮೇಶ ಪೂಜಾರ, ಕಾರ್ಯದರ್ಶಿ, ಮುಖ್ಯಗುರುಮಾತೆ ಡಾ.ಜ್ಯೋತಿ ರಮೇಶ ಪೂಜಾರ ಅವರು ವೇದಿಕೆ ಮೇಲಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಲಕ್ಷೀಂಬಾಯಿ ಪೂಜಾರ, ಪಾರ್ವತಿ ಹೂಗಾರ, ಕಸ್ತೂರಿ ಪೂಜಾರಿ, ನಿತಿನ ಪೂಜಾರಿ, ಸೌಮ್ಯಾ ಪೂಜಾರಿ, ಶಂಕರ ಹೂಗಾರ, ಶಿಕ್ಷಕಿಯರಾದ ಆಶ್ವಿನಿ ಲೋಣಿ, ಸಾಧನಾ ಇಮಡೆ, ಮಂಗಳಾ ಬಮ್ಮಣ್ಣಿ, ದಾನಮ್ಮ ಕೋರಿ, ಪ್ರೀಯಾ ಪವಾಡೆ, ರೇವತಿ ಬಳೂಂಡಗಿ, ಸಿಬ್ಬಂದಿಗಳಾದ ಶ್ರೀಶೈಲ ಹೂಗಾರ, ಆನಂದಯ್ಯಸ್ವಾಮಿ ಹಿರೇಮಠ, ಅಂಬಿಕಾ ಕರಿಶೆಟ್ಟಿ, ಹೇಮಾ ಬಡಿಗೇರ, ರೆಹಮತಬಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




