ಪ್ರಜಾಸ್ತ್ರ ಸುದ್ದಿ
ನಾಗ್ಪುರ(Nagpur): ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಮೊಘಲ್ ರಾಜ ಔರಂಗಜೇಬ್(Aurangzeb) ಗುಮ್ಮಟ ತೆರವುಗೊಳಿಸುವಂತೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಸೋಮವಾರ ನಾಗ್ಪುರದಲ್ಲಿ ಈ ಸಂಬಂಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ಘಟನೆ ಸಂಬಂಧ ಇದುವರೆಗೂ 45 ಜನರನ್ನು ಬಂಧಿಸಲಾಗಿದೆ. ಈ ಘಟನೆ ಕಾರಣರಾದವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿಹೆಚ್ ಪಿ(VHP) ಒತ್ತಾಯಿಸಿದೆ.
ಪೊಲೀಸ್ ಜೀಪ್ ಗೆ ಬೆಂಕಿ ಹಚ್ಚಲಾಗಿದೆ. 34 ಪೊಲೀಸರು ಹಾಗೂ ಐದು ಜನರು ಗಾಯಗೊಂಡಿದ್ದಾರೆ. ಮರಾಠಾ ಸಾಮ್ರಾಜ್ಯದಲ್ಲಿ ಔರಂಗಜೇಬ್ ಸೋಲಿಸಿದ ನೆನಪಿಗಾಗಿ ವಿಜಯಸ್ತಂಭ ಸ್ಥಾಪಿಸಬೇಕು. ಧನಾಜಿ ಜಾಧವ್, ಶಾಂತಜಿ ಘೋರ್ಪಡೆ, ಛತ್ರಪತಿ ರಾಜಾರಾಮಜಿ ಮಹಾರಾಜರ ನೆನಪಿಗಾಗಿ ವಿಜಯ ಸ್ಮಾರಕ ನಿರ್ಮಿಸಬೇಕು. ಸೋಮವಾರ ನಾಗಪುರದ ಚಿಟ್ನಿಸ್ ಪಾರ್ಕ್ ಹತ್ತಿರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ(Violence)ತಿರುಗಿತು.