ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಪತ್ನಿ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಸ್ವಯಂ ಘೋಷಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ವಯಂ ಘೋಷಣೆ ಪತ್ರಕ್ಕೆ ಸಹಿ ಮಾಡಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜಯನಗರದಲ್ಲಿರುವ ಇವರ ಮನೆಗೆ ಸಮೀಕ್ಷೆಯವರು ಹೋದಾಗ, ನಾವು ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ. ಈ ಸಮೀಕ್ಷೆಯಲ್ಲಿ ಭಾಗವಹಿಸುವುದರಿಂದ ಸರ್ಕಾರಕ್ಕೆ ಏನೂ ಲಾಭವಿಲ್ಲ. ಹೀಗಾಗಿ ಪಾಲ್ಗೊಳ್ಳುವುದಿಲ್ಲ ಎಂದು ಸ್ವಯಂ ಘೋಷಣಾ ಪತ್ರದಲ್ಲಿ ಹೇಳಿದ್ದಾರಂತೆ. ಬೆಂಗಳೂರು ನಗರದಲ್ಲಿ ಇದುವರೆಗೂ ಶೇಕಡ 81ರಷ್ಟು ಸಮೀಕ್ಷೆಯಾಗಿದೆಯಂತೆ.