ಪ್ರಜಾಸ್ತ್ರ ಸುದ್ದಿ
ಉಡುಪಿ(Udupi): ಶನಿವಾರ ನಕ್ಸಲ್(Naxalite) ರವೀಂದ್ರ ಚಿಕ್ಕಮಗಳೂರಲ್ಲಿ ಶರಣಾಗಿದ್ದ. ಭಾನುವಾರ ತೊಂಬಟ್ಟುವಿನ ಲಕ್ಷ್ಮಿ ಉಡುಪಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶರಣಾಗಿದ್ದಾರೆ. ಇದಕ್ಕೂ ಮೊದಲು ಎಸ್ಪಿ ಕಚೇರಿಗೆ ಕರೆದುಕೊಂಡು ಹೋಗಿ ಶರಣಾಗತಿ ಪ್ರಕ್ರಿಯೆಗಳನ್ನು ಮುಗಿಸಲಾಯಿತು. ವೈದ್ಯಕೀಯ ತಪಾಸಣೆ ಬಳಿಕ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ತೊಂಬಟ್ಟು ಲಕ್ಷ್ಮಿ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಮುಖ್ಯಮಂತ್ರಿಗಳ ಕೆರೆಗೆ ಓಗಟ್ಟು ಶರಣಾಗಿದ್ದೇನೆ ಎಂದು ಲಕ್ಷ್ಮಿ ಈ ವೇಳೆ ಹೇಳಿದ್ದಾರೆ. ಶರಣಾಗತಿ ಸಂದರ್ಭದಲ್ಲಿ ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಸದಸ್ಯ ಕೆ.ಪಿ ಶ್ರೀಪಾಲ್, ಲಕ್ಷ್ಮಿ ಪತಿ ಸಂಜೀವಕುಮಾರ್, ಸಹೋದರ ವಿಠಲ್ ಪೂಜಾರಿ ಉಪಸ್ಥಿತರಿದ್ದರು.