Ad imageAd image

ಜಿಲ್ಲಾಧಿಕಾರಿ ಕಚೇರಿ ಬದಲು ಸಿಎಂ, ಗೃಹ ಸಚಿವರ ಮುಂದೆ ನಕ್ಸಲರು ಶರಣಾಗತಿ

Nagesh Talawar
ಜಿಲ್ಲಾಧಿಕಾರಿ ಕಚೇರಿ ಬದಲು ಸಿಎಂ, ಗೃಹ ಸಚಿವರ ಮುಂದೆ ನಕ್ಸಲರು ಶರಣಾಗತಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು(ಬುಧವಾರ) 6 ನಕ್ಸಲರು ಶರಣಾಗತಿ ಆಗುತ್ತಾರೆ ಎಂದು ಹೇಳಲಾಗಿತ್ತು. ಅದಕ್ಕೆ ಸಕಲ ರೀತಿಯ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ದಿಢೀರ್ ಎಂದು ಬದಲಾವಣೆಯಾಗಿದ್ದು, ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಎದುರು ಶರಣಾಗತಿ ಆಗುತ್ತಿದ್ದಾರೆ. ಹೀಗಾಗಿ 6 ನಕ್ಸಲರು ಬೆಂಗಳೂರಿನತ್ತು ಪ್ರಯಾಣ ಬೆಳೆಸಿದ್ದಾರೆ.

ಬಾಳೆಹೊನ್ನೂರಿನಿಂದ ಈಗಾಗ್ಲೇ ಹೊರಟಿದ್ದಾರೆ. ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ನೇತೃತ್ವದಲ್ಲಿ ಇವರನ್ನು ಮುಖ್ಯವಾಹಿನಿಗೆ ತರುವ ಕೆಲಸ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್ ಮುಂದೆ ಇವರು ಶರಣಾಗತಿಯಾಗಲಿದ್ದಾರೆ. ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್, ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮ್ಟೆ, ಐಎಸ್ ಡಿ ಎಸ್ಪಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ಕೆಲಸ ನಡೆಯುತ್ತಿದೆ. ಗೃಹ ಕಚೇರಿ ಕೃಷ್ಣದಲ್ಲಿ ಇವರು ಹಾಜರಾಗಲಿದ್ದಾರಂತೆ.

WhatsApp Group Join Now
Telegram Group Join Now
Share This Article