ಪ್ರಜಾಸ್ತ್ರ ಸುದ್ದಿ
ಪ್ಯಾರಿಸ್(Paris): ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್(Paris Olympics-2024)) ಟೂರ್ನಿಯಲ್ಲಿ ಭಾರತದ ಸ್ಟಾರ್ ಜಾವೆಲಿನ್(Javelin Throw) ಥ್ರೋ ಆಟಗಾರ, ಹಾಲಿ ಚಾಂಪಿಯನ್ ನೀರಜ್ ಚೋಪ್ರಾ(Neeraj Chopra) ಫೈನಲ್ ಗೆ ಎಂಟ್ರಿ ಪಡೆದಿದ್ದಾರೆ. ಫ್ರಾನ್ಸ್ ನಲ್ಲಿ ಇಂದು ನಡೆದ ಪುರುಷರ ಅರ್ಹತಾ ಸುತ್ತಿನಲ್ಲಿ 89.34 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಅಮೋಘ ಸಾಧನೆ ಮಾಡಿದರು. ಇದು ಅವರ ಹಿಂದಿನ ದಾಖಲೆಯನ್ನು ಮುರಿದಿದ್ದು, ಚಿನ್ನವನ್ನು(Gold) ತಮ್ಮಲ್ಲಿಯೇ ಉಳಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ.
ಬಿ.ಗುಂಪಿನಲ್ಲಿ ಗ್ರೆಂಡಾದ ಎ.ಪೀಟರ್ಸ್ 88.63 ಮೀಟರ್ ಎಸೆದು 2ನೇ ಸ್ಥಾನ, ಪಾಕಿಸ್ತಾನದ ಎ.ನದೀಮ್ 86.59 ಮೀಟರ್ ಎಸೆದು 3ನೇ ಸ್ಥಾನ ಪಡೆದರು. ಎ.ಗುಂಪಿನಲ್ಲಿ ಜರ್ಮನಿಯ ಜೆ ವೆಬರ್ 87.76 ಮೀಟರ್ ಎಸೆದು ಮೊದಲ ಸ್ಥಾನ, ಕಿನ್ಯಾದ ವೈ.ಯೆಗೊ 85.97 ಮೀಟರ್ ಎಸೆದ 2ನೇ ಸ್ಥಾನ ಹಾಗೂ ಸಿಝಿಚಿಯಾದ ಜೆ.ವೆಡ್ಲಜೆಚ್ 85.63 ಮೀಟರ್ ಎಸೆದು 3ನೇ ಸ್ಥಾನ ಪಡೆದರು. ಭಾರತದ ಕೆ.ಜೇನಾ 80.73 ಮೀಟರ್ ಎಸೆದಿದ್ದು 12ನೇ ಸುತ್ತಿಗೆ ಪ್ರವೇಶಿಸುವ ಸಾಧ್ಯತೆ ಕಡಿಮೆಯಿದೆ.