ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಭಾರತದ ಜಾವೆಲಿನ್ ಕ್ರೀಡಾಪಟು ನೀರಜ್ ಚೋಪ್ರಾ ಪ್ಯಾರಿಸ್ ಡೈಮೆಂಡ್ ಲೀಗ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಎರಡು ವರ್ಷಗಳ ಬಳಿಕ ಚಿನ್ನದ ಪದಕ ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ 88.16 ಮೀಟರ್, ಎರಡನೇ ಎಸೆತದಲ್ಲಿ 85.10 ಮೀಟರ್ ಹಾಗೂ ಕೊನೆಯ ಎಸೆತದಲ್ಲಿ 82.89 ಮೀಟರ್ ಎಸೆಯುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದರು.
ಜರ್ಮನಿಯ ಜೂಲಿಯನ್ ವೆಬರ್ 87.88 ಮೀಟರ್ ಎಸೆದು 2ನೇ ಸ್ಥಾನ ಪಡೆದರು. ಬ್ರೆಜಿಲ್ ನ ಲೂಯಿಸ್ ಮಾರಿಸಿಯೊ ಡಿ ಸಿಲ್ವ 86.62 ಮೀಟರ್ ಎಸೆದು 3ನೇ ಸ್ಥಾನ ಪಡೆದರು.