ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ದೇಶ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಿದ ನೀಟ್ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ನೀಟ್(NEET-UG) ಮರು ಪರೀಕ್ಷೆ ನಡೆಸುವುದು ಪರಿಹಾರವಲ್ಲ. ಹೀಗಾಗಿ ಮರು ಪರೀಕ್ಷೆ ಇಲ್ಲ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ(CJI) ಡಿ.ವೈ ಚಂದ್ರಚೂಡ್ ಅವರಿದ್ದ ಪೀಠ, ಪರೀಕ್ಷೆ ನಡೆಸುವಲ್ಲಿ ದೋಷಗಳು ಕಂಡು ಬಂದಿವೆ. ಇದರಿಂದ 155 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಇದರಿಂದಾಗಿ ಮರು ಪರೀಕ್ಷೆ ನಡೆಸಿದರೆ 24 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದಿದ್ದಾರೆ. ಈ ತೀರ್ಪಿನ ಆಕ್ಷೇಪಣೆಯನ್ನು ಆಗಸ್ಟ್ 21ರಂದು ಕೇಳಲಾಗುವುದು ಎಂದು ಹೇಳಲಾಗಿದೆ.
1 ಲಕ್ಷದ 8 ಸಾವಿರ ಸೀಟುಗಳಿಗಾಗಿ ಬರೋಬ್ಬರಿ 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 180 ಪ್ರಶ್ನೆಗಳಿರುವ ಪರೀಕ್ಷೆಗೆ 720 ಅಂಕಗಳು ಇರುತ್ತವೆ. ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕವಿರುತ್ತೆ. ಪರೀಕ್ಷೆಯಲ್ಲಿ ಅಕ್ರಮ ನಡೆದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ದೇಶದ ತುಂಬಾ ಪ್ರತಿಭಟನೆಗಳು ನಡೆದಿವೆ. ಹಲವು ರಾಜ್ಯಗಳಲ್ಲಿ ಎಫ್ಐಆರ್(FIR) ದಾಖಲಾಗಿದೆ. ಕೆಲವರ ಬಂಧನವಾಗಿದೆ.