ಪ್ರಜಾಸ್ತ್ರ ಸುದ್ದಿ
ಪರ್ತ್(Parth): ಆಸ್ಟ್ರೇಲಿಯಾ ನೆಲದಲ್ಲಿ ಶುರುವಾಗಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಜಸ್ಪ್ರೀತ್ ಬೂಮ್ರಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಆರಂಭಿಕ ಆಟಗಾರರು ಕೈ ಕೊಟ್ಟ ಪರಿಣಾಮ 22.2 ಓವರ್ ಗಳಲ್ಲಿ 47 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಅನುಭವಿ ಆಟಗಾರ ವಿರಾಟ್ ಕೊಹ್ಲಿ ಮತ್ತೆ ಕೈ ಕೊಟ್ಟಿದ್ದು ಕೇವಲ 5 ರನ್ ಗಳಿಸಿ ವೈಫಲ್ಯ ಮುಂದುವರೆಸಿದರು. ತವರು ನೆಲದಲ್ಲಿ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಉತ್ತಮ ಆಟ ಬಂದಿಲ್ಲ.
ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ದೇವದತ್ ಪಡಿಕಲ್ ಶೂನ್ಯಕ್ಕೆ ಔಟ್ ಆದರು. ಹೀಗಾಗಿ 32ಕ್ಕೆ 3 ವಿಕೆಟ್ ಬಿದ್ದವು. 26 ರನ್ ಗಳೊಂದಿಗೆ ಆಟವಾಡುತ್ತಿದ್ದ ಕೆ.ಎಲ್ ರಾಹುಲ್ ಮಿಚಲ್ ಸ್ಟ್ರಾಕ್ ಬೌಲಿಂಗ್ ನಲ್ಲಿ ಅಲೆಕ್ಸ್ ಗೆ ಕ್ಯಾಚ್ ಕೊಟ್ಟು ನಿರಾಸೆ ಮೂಡಿಸಿದರು.
ಟೆಸ್ಟ್ ಗೆ ಪಾದಾರ್ಪಣೆ ಮಾಡಿದ ಆಟಗಾರರು:
ಯುವ ಆಟಗಾರರಾದ ಹರ್ಷೀತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಧ್ರುವ್ ಜುರೇಲ್, ದೇವದತ್ ಪಡಿಕಲ್ ಗೂ ಅವಕಾಶ ನೀಡಲಾಗಿದೆ. ಆದರೆ, ಸರ್ಫರಾಜ್ ಖಾನ್, ಆಕಾಶ್ ದೀಪ್ ಅವಕಾಶ ವಂಚಿತರಾಗಿದ್ದಾರೆ. ಇನ್ನು ಹಿರಿಯ ಆಟಗಾರರಾದ ರವಿಚಂದ್ರನ್ ಅಶ್ವಿನ್, ರವೀಂದ್ರ್ ಜಡೇಜಾರನ್ನು ಕೈ ಬಿಡಲಾಗಿದೆ. 2ನೇ ಮಗುವಿನ ತಂದೆಯಾಗಿರುವ ಕಾಯಂ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಉಪ ನಾಯಕ ಬೂಮ್ರಾ ಮೊದಲ ಪಂದ್ಯವನ್ನು ಮುನ್ನಡೆಸುತ್ತಿದ್ದಾರೆ.