ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಮತ್ತು ಸನ್ಮಿತ್ರ ಬಿಡುಗಡೆ ಹಾಗೂ ಪೊಲೀಸ್ ಸಿಬ್ಬಂದಿಗೆ ನೂತನ ಪೀಕ್ ಕ್ಯಾಪ್ ಪರಿಚಯ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪೊಲೀಸ್ ಮಹಾನಿರ್ದೇಶಕ ಸಲೀಂ ಸೇರಿದಂತೆ ಹಿರಿಯ ಅಧಿಕಾರಿಗಳು, ಶಾಸಕರು ಭಾಗವಹಿಸಿದ್ದರು.
ಪೊಲೀಸ್ ಸಿಬ್ಬಂದಿಗೆ ಸಾಂಕೇತಿಕವಾಗಿ ಪೀಕ್ ಕ್ಯಾಪ್ ತೊಡಿಸುವ ಮೂಲಕ ನೂತನ ಕ್ಯಾಪ್ ಪರಿಚಯಿಸಲಾಯಿತು. ಕಡುನೀಲಿ ಬಣ್ಣದ ಕ್ಯಾಪ್ ಶೀಘ್ರದಲ್ಲಿ ರಾಜ್ಯದ ಎಲ್ಲ ಪೊಲೀಸ್ ಸಿಬ್ಬಂದಿಗೆ ತಲುಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕಳೆದ 40 ವರ್ಷಗಳಿಂದ ಪೊಲೀಸ್ ಇಲಾಖೆಯಿಂದ ಇಟ್ಟಿದ್ದ ಪೀಕ್ ಕ್ಯಾಪ್ ಬೇಡಿಕೆ ಇದೀಗ ಈಡೇರಿದೆ.
ದೆಹಲಿ, ಗೋವಾ, ಕೇರಳ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ಪೊಲೀಸರು ಹಾಗೂ ಭಾರತೀಯ ನೌಕಾಪಡೆ ಈ ಮಾದರಿಯ ಪೀಕ್ ಕ್ಯಾಪ್ ಧರಿಸುತ್ತಾರೆ. ಎಲಾಸ್ಟಿಕ್ ನಿಂದ ಹೊಸ ಟೋಪಿ ಕೂಡಿದ್ದು, ಸಿಬ್ಬಂದಿ ತಲೆಯಲ್ಲಿ ಸರಿಯಾಗಿ ಕೂರಲಿವೆ. ರಾಜ್ಯದ 1 ಲಕ್ಷ ಪೊಲೀಸ್ ಸಿಬ್ಬಂದಿ ಇನ್ಮುಂದೆ ಕಡುನೀಲಿ ಬಣ್ಣದ ಪೀಕ್ ಕ್ಯಾಪ್ ಧರಿಸಲಿದ್ದಾರೆ.




