ಪ್ರಜಾಸ್ತ್ರ ಸುದ್ದಿ
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಡೌಗ್ ಬ್ರೇಸ್ ವೆಲ್ ಎಲ್ಲ ಮಾದರಿಯ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. 35 ವರ್ಷದ ಆಟಗಾರ ಕಳೆದ ಎರಡು ವರ್ಷಗಳಿಂದ ತಂಡಕ್ಕೆ ಆಯ್ಕೆ ಆಗಿರಲಿಲ್ಲ. ಇದೀಗ ಕ್ರಿಕೆಟ್ ಆಟಕ್ಕೆ ನಿವೃತ್ತಿ ಹೇಳಿದ್ದಾರೆ.
ನ್ಯೂಜಿಲೆಂಡ್ ಪರ 2011ರಿಂದ ಇಲ್ಲಿಯವರೆಗೆ 28 ಟೆಸ್ಟ್, 21 ಏಕದಿನ ಹಾಗೂ 20 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ74 ವಿಕೆಟ್ ಪಡೆದಿದ್ದು, ಏಕದಿನ ಪಂದ್ಯದಲ್ಲಿ 46 ವಿಕೆಟ್ ಪಡೆದಿದ್ದಾರೆ. 2023ರಲ್ಲಿ ಶ್ರೀಲಂಕಾ ವಿರುದ್ಧ ಆಡಿದ ಟೆಸ್ಟ್ ಪಂದ್ಯ ಕೊನೆಯದಾಗಿದೆ. ಪಕ್ಕೆಲುಬಿನ ಗಾಯದಿಂದ ಕ್ರಿಕೆಟ್ ಆಟದಿಂದ ದೂರ ಉಳಿಯಲು ನಿರ್ಧರಿಸಿ ನಿವೃತ್ತಿ ಘೋಷಿಸಿದ್ದಾರೆ.




