LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಧಾನಿ ಮೋದಿಗೆ ಪ್ರಶ್ನೆ ಕೇಳಿದ ಪತ್ರಕರ್ತೆಗೆ ಜೀವ ಬೆದರಿಕೆ!

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಪ್ರಧಾನಿ ಮೋದಿ ನಾರ್ವೆ ದೇಶದ ಪ್ರವಾಸದ ವೇಳೆ ಅಲ್ಲಿನ ಪತ್ರಕರ್ತೆ ಹೆಲ್ಲೆ ಲಿಂಗ್ ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರಧಾನಿ ಮೋದಿ ಉತ್ತರಿಸಿದ ಸುಮ್ಮನೆ ಹೋಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈಗ ಪತ್ರಕರ್ತೆ ಹೆಲ್ಲೆ ಲಿಂಗ್ ಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ವಿದೇಶಿ ಗೂಢಚಾರಣಿ ಅನ್ನೋ ಪಟ್ಟ ಕಟ್ಟಲಾಗುತ್ತಿದೆ. ಆಕೆಯ ಸಾಮಾಜಕ ಜಾಲತಾಣದ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಹೆಲ್ಲೆ, ನಾನು ವಿದೇಶಿ ಸರ್ಕಾರದ ಗೂಢಚಾರಣಿ ಅಲ್ಲ. ಪತ್ರಿಕೋದ್ಯಮ ನನ್ನ ವೃತ್ತಿ. ಇದನ್ನು ನಾನು ಬರೆಯಬೇಕಾಗುತ್ತೆ ಎಂದುಕೊಂಡಿರಲಿಲ್ಲ. ಭಾರತದ ಪ್ರಧಾನಿ ಮೋದಿ ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ. ಅವರು ಉತ್ತರಿಸುತ್ತಾರೆ ಅನ್ನೋ ನಿರೀಕ್ಷೆಯೂ ಇರಲಿಲ್ಲ. ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದೆ. ಭಾರತ 157 ಸ್ಥಾನದಲ್ಲಿದೆ. ನಾವು ಯಾರನ್ನು ಸಹಕರಿಸುತ್ತೇವೆಯೋ ಅವರನ್ನು ಪ್ರಶ್ನೆ ಮಾಡುವುದು ನಮ್ಮ ಕೆಲಸ ಎಂದಿದ್ದಾರೆ.

3ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ನಾರ್ವೆ ದೇಶಕ್ಕೆ ತೆರಳಿದ್ದರು. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಧ್ಯಮಗೋಷ್ಠಿ ಆಯೋಜಿಸಿತ್ತು. ನಾವು ನಮ್ಮ ಪಾಲುದಾರಿಕೆಯನ್ನು ಬಲಪಡಿಸುತ್ತಿರುವಾಗ ನಿಮ್ಮನ್ನು ಯಾಕೆ ನಂಬಬೇಕು? ನಿಮ್ಮ ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯುತ್ತೇವೆ ಎನ್ನುವ ಭರವಸೆ ನೀಡಬಹುದೆ? ಮುಂದಿನ ದಿನಗಳಲ್ಲಾದರೂ ಭಾರತದ ಪ್ರಧಾನ ಮಂತ್ರಿಗಳು ಮಾಧ್ಯಮಗಳಿಂದ ಇಂತಹ ಕಟು ಪ್ರಶ್ನೆಗಳನ್ನು ಎದುರಿಸಲು ಶುರು ಮಾಡುತ್ತಾರ? ಸಾಧ್ಯವಾದರೆ ಇದಕ್ಕೆ ನೇರ ಉತ್ತರ ನೀಡಿ ಎಂದು ಹೆಲ್ಲೆ ಲಿಂಗ್ ಕೇಳಿದ್ದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST