ಪ್ರಜಾಸ್ತ್ರ ಸುದ್ದಿ
ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸಮನ್ ನಿಕೋಲಸ್ ಪೂರಾನ್ ಏಕಾಏಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. 29 ವರ್ಷದ ಪೂರಾನ್ ಈ ನಿರ್ಧಾರದಿಂದ ತಂಡಕ್ಕೂ ಶಾಕ್ ಆಗಿದೆ. ಇನ್ನೂ 8 ತಿಂಗಳಲ್ಲೇ ಟಿ-20 ವಿಶ್ವಕಪ್ ಟೂರ್ನಿ ಶುರುವಾಗಲಿದೆ. ಇದು ಕಷ್ಟಕರ ನಿರ್ಧಾರವೆಂದು ಹೇಳುವುದರೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ನಿವೃತ್ತಿ ವಿಚಾರವನ್ನು ತಿಳಿಸಿದ್ದಾರೆ.
61 ಏಕದಿನ ಪಂದ್ಯ ಆಡಿ 1,983 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ, 11 ಅರ್ಧ ಶತಕಗಳಿವೆ. 106 ಟಿ-20 ಪಂದ್ಯಗಳಿಂದ 2,275 ರನ್ ಗಳಿಸಿದ್ದು, 13 ಅರ್ಧ ಶತಕ ಗಳಿಸಿದ್ದಾರೆ. ಒಂದೇ ಒಂದು ಟೆಸ್ಟ್ ಪಂದ್ಯವಾಡಿಲ್ಲ. ಐಪಿಎಲ್ ನಲ್ಲಿ 2019-21ರ ತನಕ ಪಂಜಾಬ್ ಕಿಂಗ್ಸ್, 2023ರಿಂದ ಲಖನೌ ಪರ ಆಡುತ್ತಿದ್ದಾರೆ.