ಪ್ರಜಾಸ್ತ್ರ ಸುದ್ದಿ
ಪಾಟ್ನಾ(Patna): 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಜೆಡಿ(ಯು) ನಾಯಕ ನಿತೀಶ್ ಕುಮಾರ್ ಗುರುವಾರ ಮುಂಜಾನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗಾಂಧಿ ಮೈದಾನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಿತೀಶ್ ಕುಮಾರ್ ಐತಿಹಾಸಿಕ ದಾಖಲೆ ಮಾಡಿದರು. ಈ ವೇಳೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಎನ್ ಡಿಎ ನಾಯಕರು ಭಾಗವಹಿಸಿದ್ದರು.
ಬಿಜೆಪಿಯ ಸಮರ್ಥ ಚೌಧರಿ, ವಿಜಯ್ ಕುಮಾರ್ ಸಿನ್ಹಾ, ಎಲ್ ಜಿಪಿ(ರಾಮ್ ವಿಲಾಸ್ ಪಾಸ್ವಾನ್) ಯ ಇಬ್ಬರು ಸೇರಿದಂತೆ ಎನ್ ಡಿಎ ಬಣದ 19 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.




