ಪ್ರಜಾಸ್ತ್ರ ಸುದ್ದಿ
ಮೆಲ್ಬೋರ್ನ್(MCG): ಬಾರ್ಡರ್-ಗವಾಸ್ಕರ್ ಟೂರ್ನಿಯ 4ನೇ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ ಭಾರತ 358 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡಿದೆ. ಇದರೊಂದಿಗೆ ಫಾಲೋ ಆನ್ ದಿಂದ ತಪ್ಪಿಸಿಕೊಂಡು ನಿಟ್ಟುಸಿರು ಬಿಟ್ಟಿದೆ. ಯುವ ಆಟಗಾರರಾದ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಸಿಂಗ್ಟನ್ ಸುಂದರ್ ಸೊಗಸಾದ ಆಟದಿಂದ 300ರ ಗಡಿ ದಾಟುವಂತಾಗಿದೆ. 1 ಸಿಕ್ಸ್ 10 ಫೋರ್ ಗಳೊಂದಿಗೆ 105 ರನ್ ಗಳಿಸಿ ಅಜೇಯರಾಗಿ ಉಳಿದಿರುವ ನಿತೀಶ್ ಕುಮಾರ್ ರೆಡ್ಡಿ ಟೆಸ್ಟ್ ನಲ್ಲಿ ಚೊಚ್ಚಲ ಶತಕ ದಾಖಲಿಸಿದರು.
ಇನ್ನೊಂದು ಕಡೆ ಸಾಥ್ ನೀಡಿದ ಬೌಲರ್ ವಾಸಿಂಗ್ಟನ್ ಸುಂದರ್ 50 ರನ್ ಗಳಿಸಿದರು. ಹೀಗಾಗಿ ಹೀನಾಯ ಹಿನ್ನಡೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ. ನಿತೀಶ್ ಹಾಗೂ ಮೊಹಮ್ಮದ್ ಸಿರಾಜ್ ಕ್ರಿಸ್ ನಲ್ಲಿದ್ದಾರೆ. ಆಸೀಸ್ ಪರ ಸ್ಕಾಟ್ ಬೋಲಂಡ್, ನಾಯಕ ಕಮಿನ್ಸ್ ತಲಾ 3 ವಿಕೆಟ್ ಪಡೆದು ಮಿಂಚಿದರು. ನಾಥನ್ 2 ವಿಕೆಟ್ ಕಿತ್ತು ಸಾಥ್ ನೀಡಿದರು. 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿವೆ.